ಕೂಡ್ಲಿಗಿ ಕ್ಷೇತ್ರಪಕ್ಷ ಸಹಕರಿಸಿದರೆ ಸಿದ್ದ: ಸಣ್ಣ ಪಕ್ಕೀರಪ್ಪ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.10: ಅವಿಭಜಿತ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರ  ಆರಂಭದಲ್ಲೂ ಮತ್ತು 1999 ರಿಂದ ಈ ವರಗೆ ಕ್ಷೇತ್ರದ ಹೊರಗಿನವರನ್ನೇ ಆಯ್ಕೆ ಮಾಡುತ್ತಾ ಬಂದಿದೆ.
ಅದಕ್ಕಾಗಿ ಹೊರಗಿನ ಜನ ಇಲ್ಲಿ ಸ್ಪರ್ಧೆ ಮಾಡಲು ಬಯಸುತ್ತಿದ್ದಾರೆ. ಕೂಡ್ಲಿಗಿಯಲ್ಲಿಯೇ ಮನೆ ಮಾಡಿದ್ದರೂ. ಅವರ ಮೂಲ ಕ್ಷೇತ್ರದ ಹೊರಗಿನದೇ ಆಗಿರುತ್ತದೆ.
ಈ ನಿಟ್ಟಿನಲ್ಲಿ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಮಾಜಿ ಸಂಸದ  ಸಚಿವ ಶ್ರೀರಾಮುಲು ಅವರ ಸೋದರ ಸಂಬಂಧಿ ಸಣ್ಣ ಪಕ್ಕೀರಪ್ಪ‌ ಅವರನ್ನು ಕಣಕ್ಕಿಳಿಸಲು ಬಯಸಿದೆ ಎಂದು ತಿಳಿದು ಬಂದಿದೆ.
ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ. ಸಾಕಷ್ಟು ಕಳೆದುಕೊಂಡು ಅಲ್ಪ ಮತಗಳ ಅಂತರದಿಂದ ಸೋಲು‌ಕಂಡಿದ್ದರು.
ಆಗಿನಿಂದ ನನಗೆ ವಿಧಾನ ಸಭಾ ಚುನಾವಣೆಯ ತಂಟೆಯೇ ಬೇಡ ಎಂದು. ಬೇಕಾದರೆ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವೆ  ಎನ್ನುತ್ತಿದ್ದರು.
ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಪಕ್ಷದ ಹೈ ಕಮಾಂಡ್ ಬೆಂಗಳೂರಿಗೆ ಕರೆಸಿ ಸ್ಪರ್ಧೆಗೆ ಸಿದ್ದರಾಗಿ ಎಂದು ನಾಮಪತ್ರ ಸಲ್ಲಿಸಲು ದಾಖಲೆ ಸಿದ್ದಪಡಿಸಿಕೊಳ್ಳಲು ಸೂಚಿಸಿದೆಯಂತೆ.
ಪಕ್ಷ ಸೂಚಿಸಿದೆ. ಆದರೆ ಚುನಾವಣೆ ಎದುರಿಸಲು ಒಂದಿಷ್ಟು ಆರ್ಥಿಕ‌ಶಕ್ತಿ ಬೇಕು. ತಕ್ಷಣ ನನ್ನಿಂದ ಆಗಲ್ಲ. ಕಳೆದ ಬಾರಿಯ ಅಭ್ಯರ್ಥಿಗೆ  ಸಹಕಾರ ಮಾಡಿದಂತೆ ನನಗೂ ಮಾಡಿದರೆ ನಾನು ಸಿದ್ದ. ಮುಖ್ಯವಾಗಿ ಆರ್ಥಿಕ ಸಹಕಾರ ಅಗತ್ಯ.
ಸಣ್ಣ ಪಕ್ಕೀರಪ್ಪ, ಮಾಜಿ ಸಂಸದರು.