
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮೇ. 4 :- ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಬಹಳಷ್ಟು ಕೂಲಿಕಾರ್ಮಿಕರು ಕೂಲಿ ಹರಸಿ ಗುಳೇ ಹೋಗುತ್ತಿರುವುದನ್ನು ಕಾಣುತ್ತಿದ್ದೇವೆ ಹಾಗೂ ಪದವೀಧರರಾದರು ಉದ್ಯೋಗವಿಲ್ಲದೆ ಬೆಂಗಳೂರಿನಂತಹ ನಗರಗಳಲ್ಲಿ ಹೋಟೆಲ್ ಇತರೆಡೆ ಹೋಗಿ ಜೀವನ ಸಾಗಿಸುತ್ತಿದ್ದಾರೆ ಇದಕ್ಕೆಲ್ಲ ಅಂತ್ಯ ಹಾಡಲು ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿಗೆ ಮತ ನೀಡಿ ಗೆಲ್ಲಿಸಿ ನನ್ನನ್ನು ಕಳಿಸಿದಲ್ಲಿ ಗುಳೇ ತಪ್ಪಿಸುವ ಹಾಗೂ ನಿರುದ್ಯೋಗ ಸಮಸ್ಯೆ ನೀಗಿಸುವ ಕಾರ್ಯ ತಪ್ಪದೆ ಮಾಡುವೆ ಎಂದು ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕೇಶ ವಿ ನಾಯಕ ಮತದಾರರಿಗೆ ತಿಳಿಸಿದರು.
ಕೂಡ್ಲಿಗಿ ಪಟ್ಟಣದ 20ವಾರ್ಡಗಳಲ್ಲಿ ಮತಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಈ ಕುರಿತು ಅಭ್ಯರ್ಥಿ ಲೋಕೇಶ ನಾಯಕ ಮಾತನಾಡುತ್ತ ಹಿಂದುಳಿದ ಮಳೆಯಾಶ್ರೀತ ಪ್ರದೇಶವಾಗಿರುವ ಕೂಡ್ಲಿಗಿ ಕ್ಷೇತ್ರದಲ್ಲಿ ಮಳೆ ಬಂದರೆ ಬೆಳೆ ಇಲ್ಲವಾದರೆ ಗುಳೇ ಎಂಬಂತಾಗಿದೆ ಕಳೆದ ಬಾರಿ ಬಿಜೆಪಿ ಸರ್ಕಾರ ಕೂಡ್ಲಿಗಿ ಕ್ಷೇತ್ರದ 76ಕೆರೆಗಳಿಗೆ ನೀರುತುಂಬಿಸುವ ಯೋಜನೆಗೆ ಸಾವಿರರೂ ಕೋಟಿ ಅನುದಾನ ನೀಡಿರುವುದು ನಿಮಗೆಲ್ಲ ತಿಳಿದಿರುವ ವಿಚಾರವಾಗಿದೆ ಇದರಿಂದ ಕ್ಷೇತ್ರದಲ್ಲಿ ಹಸಿರು ಕ್ರಾಂತಿಯಾಗಲು ಅನುಕೂಲವಾಗಿದ್ದು ಇದನ್ನು ಮನಗಂಡ ರೈತರು ಹಾಗೂ ನಿಷ್ಠಾವಂತ ಜನತೆ ಬಿಜೆಪಿ ಸರ್ಕಾರದ ಕ್ಷೇತ್ರದ ಕಾಳಜಿ ಮರೆಯದೆ ಬಿಜೆಪಿಗೆ ಮತ ನೀಡಿಯೇತೀರುತ್ತಾರೆ. ಅಲ್ಲದೆ ಕೂಡ್ಲಿಗಿ ಕ್ಷೇತ್ರದಲ್ಲಿ ಅನೇಕ ಪದವೀಧರರಿದ್ದು ಉದ್ಯೋಗವಿಲ್ಲದೆ ಬಡತನ ನೀಗಿಸಲು ಬೆಂಗಳೂರಿನಂತಹ ನಗರಗಳಲ್ಲಿ ಹೋಟೆಲ್ ಹಾಗೂ ಇತರೆಡೆ ಕೆಲಸ ಮಾಡುತ್ತಿದ್ದಾರೆ ಇದಕ್ಕೆಲ್ಲಾ ಪರಿಹಾರವೆಂಬಂತೆ ಕ್ಷೇತ್ರದಲ್ಲಿ ಸಣ್ಣ ಕೈಗಾರಿಕೆ ಮಾಡುವ ಗುರಿ ನನ್ನದಾಗಿದ್ದು ಇದರಿಂದ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ಸಿಕ್ಕಂತಾಗುತ್ತದೆ ನೀವು ಬಿಜೆಪಿಗೆ ಬೆಂಬಲಿಸಿ ನನ್ನನ್ನು ಆರಿಸಿ ಕಳಿಸಿದಲ್ಲಿ ಸರ್ಕಾರದ ಹಾದಿಯಲ್ಲಿ ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿಗೆ ಸಹ ಮುಂದಾಗುವೆ ಇದಕ್ಕೆ ನಿಮ್ಮ ಮತದ ಆಶೀರ್ವಾದ ಅವಶ್ಯಕವಾಗಿದೆ ಎಂದರು.
ಪಟ್ಟಣದ 10, 11, 12, 13, 14 ಹಾಗೂ 15ನೇ ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿ ಲೋಕೇಶ ವಿ ನಾಯಕ ಮತ್ತು ಬಿಜೆಪಿ ಮುಖಂಡರಾದ ಜಿ ಪಂ ಮಾಜಿ ಅಧ್ಯಕ್ಷ ಜಿ ಉಮೇಶ, ಎಸ್ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ ಭೀಮೇಶ, ಎಸ್ಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಎಸ್ ದುರುಗೇಶ, ಸೋಮಯ್ಯರ ನಾಗರಾಜ, ಪ ಪಂ ಸದಸ್ಯ ಪಿ ಚಂದ್ರು, ಸಣ್ಣ ಕೊತ್ತಲಪ್ಪ, ಮಂಡಲ ಕಾರ್ಯದರ್ಶಿ ಮಂಜುನಾಥ ನಾಯಕ, ನಗರ ಘಟಕದ ಅಧ್ಯಕ್ಷ ಗುನ್ನಳ್ಳಿ ನಾರಾಯಣ, ಬಸವರಾಜ, ಪಟ್ಟಣದ ಹಿರಿಯರಾದ ಹೋಟೆಲ್ ಭರಮಣ್ಣ, ಪಾಲವ್ವನವರ ಭೀಮಣ್ಣ, ಮ್ಯಾಕಲ್ ರಾಜಣ್ಣ, ಮೋಟಪ್ಪ, ಮಂಜು ಮಾರುತಿ, ಕೊಟ್ರೇಶ, ಅಂಜಿನಿ, ಕೂಡ್ಲಿಗಿ ಸವಿತಾ ಸಮಾಜದ ಡಾ, ಶ್ರೀನಿವಾಸ, ಎಂ ನಾಗರಾಜ, ರಾಮಣ್ಣ, ಕೃಷ್ಣಪ್ಪ, ಪರಶುರಾಮ, ಲಕ್ಷ್ಮಣ, ಪವನ, ಪಾಂಡುರಂಗಪ್ಪ, ಹರೀಶ, ಶಶಿಕಲಾ ಹಾಗೂ ಇತರರು ಸೇರಿ ಮತಯಾಚಿಸಿದರು