
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 21 :- ರಾಜ್ಯದ ಹಿಂದುಳಿದ ಹಾಗೂ ಪರಿಶಿಷ್ಟ ವರ್ಗದ ಸಮುದಾಯದವರೇ ಹೆಚ್ಚಾಗಿರುವ ಕೂಡ್ಲಿಗಿ ಕ್ಷೇತ್ರಕ್ಕೆ ಈ ಬಾರಿ ಸಚಿವ ಸ್ಥಾನ ನೀಡುವಂತೆ ಕೂಡ್ಲಿಗಿ ತಾಲೂಕಿನ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಹಾಗೂ ಕಾಂಗ್ರೇಸ್ ಮುಖಂಡರು ನೂತನ ಕಾಂಗ್ರೇಸ್ ಸರ್ಕಾರದ ವರಿಷ್ಟರನ್ನು ಒತ್ತಾಯಿಸಿದ್ದಾರೆ.
ಕೂಡ್ಲಿಗಿ ಕ್ಷೇತ್ರದಲ್ಲಿ ಈ ಹಿಂದೆ ಸ್ಥಳೀಯ ಎನ್ಎಂ ನಬೀಸಾಹೇಬ್ ಸಣ್ಣ ಕೈಗಾರಿಕೆ ಸಚಿವರಾಗಿದ್ದನ್ನು ಬಿಟ್ಟರೆ ಎರಡು ದಶಕವಾದರೂ ಈ ಕ್ಷೇತ್ರಕ್ಕೆ ಸಚಿವರಾಗುವ ಯೋಗ ಯಾರಿಗೂ ಕೂಡಿ ಬಂದಿಲ್ಲ ಕುಲದೀಪ ಸಿಂಗ್ ಆಯೋಗದ ವರದಿಯಂತೆ ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗಿ ನಂತರ 15ವರ್ಷ ಕಳೆದರೂ ಸ್ಥಳೀಯರಿಗೆ ಅವಕಾಶ ಸಿಕ್ಕಿರಲಿಲ್ಲ ಆದರೆ ಈ ಬಾರಿ ಸಿಕ್ಕಿದ್ದು ಆಯ್ತು ಗೆದ್ದು ತೋರಿಸಿದ ಸ್ಥಳೀಯ ಕೂಡ್ಲಿಗಿ ಶಾಸಕ ಡಾ.ಶ್ರೀನಿವಾಸ್ ಎನ್.ಟಿ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಕಾಂಗ್ರೆಸ್ ಮುಖಂಡರು ಒಮ್ಮತದ ಕೂಗಿನೊಂದಿಗೆ ಕಾಂಗ್ರೇಸ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ವಿಜಯನಗರ ಜಿಲ್ಲಾ ಉಪಾಧ್ಯಕ್ಷ ಬಿ.ಟಿ.ಗುದ್ದಿ ದುರುಗೇಶ್, ಎಳನೀರು ಗಂಗಣ್ಣ ಮಾತನಾಡಿ, ವೈದ್ಯಕೀಯ ಶಿಕ್ಷಣದಲ್ಲಿ ದೇಶದಲ್ಲಿಯೇ ಐದನೇ ರ‌್ಯಾಂಕ್ ಪಡೆದು ನೇತ್ರಾ ವೈದ್ಯರಾಗಿರುವ ಮತ್ತು ತುಮಕೂರಿನ ಅಕ್ಷರ ಐ ಫೌಂಡೇಷನ್ ನ ನಿರ್ದೇಶಕರಾಗಿರುವ ಡಾ ಶ್ರೀನಿವಾಸ ವೈದ್ಯಕೀಯ ಪದವೀಧರ ಈ ಬಾರಿ ಕೂಡ್ಲಿಗಿ ಕ್ಷೇತ್ರದ ಶಾಸಕರು, ಎರಡು ಬಾರಿ ಅವರ ತಂದೆಯವರು ಕೂಡ್ಲಿಗಿ ಕ್ಷೇತ್ರದ ಶಾಸಕರಾಗಿದ್ದರು ಸಚಿವ ಸ್ಥಾನ ದೊರೆತಿರಲಿಲ್ಲ ಅವರ ಕನಸು ನನಸು ಮಾಡಿದ ಅವರ ಮಗ ಡಾ ಶ್ರೀನಿವಾಸ ಈಗ ಕ್ಷೇತ್ರದ ದಾಖಲೆಯಲ್ಲೇ ಐತಿಹಾಸಿಕ ಮತಗಳ ಅಂತರದ ಗೆಲುವು ಸಾಧಿಸಿ ರಾಜ್ಯದ 11ನೇ ಸ್ಥಾನದಲ್ಲಿ ಅತೀಹೆಚ್ಚು ಅಂತರದ ಗೆಲುವಿನ ಶಾಸಕರಾಗಿರುವ ಡಾ ಶ್ರೀನಿವಾಸ ಅವರಿಗೆ ಇವರ ಸಮಾಜಸೇವೆ ಗುರುತಿಸಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರ ಸರ್ಕಾರ ಸಚಿವ ಸ್ಥಾನ ನೀಡಬೇಕಿದೆ ಎಂದರು.
ವಾಲ್ಮೀಕಿ ಸಮಾಜದ ಮುಖಂಡ, ಕಾವಲ್ಲಿ ಶಿವಪ್ಪನಾಯಕ ಮಾತನಾಡಿ, 54350 ಮತಗಳ ಅಂತರದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿಹೆಚ್ಚು ಮತಗಳನ್ನು ಪಡೆದು ಜಯಗಳಿಸಿದ್ದಾರೆ, ಅವರಿಗೆ ಸಚಿವ ಸ್ಥಾನ ನೀಡಿ ಹೆಚ್ಚಿನ ಸೇವೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಅನುವು ಮಾಡಿಕೊಡಬೇಕಿದೆ ಎಂದರು.
ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಲಕ್ಕಜ್ಜಿ ಮಲ್ಲಿಕಾರ್ಜುನ, ಹುಲಿಕೆರೆ ಗ್ರಾಮ ಪಂಚಾಯ್ತಿ ಸದಸ್ಯ ದುರುಗೇಶ್, ಲೊಕಿಕೆರೆ ಅಂಜಿನಪ್ಪ, ಪಂಪಾಪತಿ,ಕಾಂಗ್ರೆಸ್ ಮುಖಂಡರಾದ ಎಚ್.ಬಿ.ಸತೀಶ್ ಇತರರಿದ್ದರು.