ಕೂಡ್ಲಿಗಿ : ಕೊರೋನಾ ಲಸಿಕೆ ಹಾಕಿಸಿಕೊಂಡ ಜನತೆ

ಕೂಡ್ಲಿಗಿ.ಏ.8:- ಪಟ್ಟಣದಲ್ಲಿ 45ವರ್ಷ ಮೇಲ್ಪಟ್ಟವರನ್ನು ಗುರುತಿಸಿ ಅವರ ಮನವೊಲಿಸಿ ಕೊರೋನಾ ಲಸಿಕೆ ಹಾಕಿಸುವಲ್ಲಿ ಪಟ್ಟಣಪಂಚಾಯತಿ, ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯತಿ ಸದಸ್ಯರು ಸಫಲರಾಗಿದ್ದಾರೆ.
ಕಳೆದ ಮೂರ್ನಾಕು ದಿನಗಳಿಂದ ಸಾರ್ವಜನಿಕರು ಬಿಸಿಲಬೇಗೆಯಿಂದ ಹೊರಬರಲು ತೊಂದರೆಯಾಗಬಹುದೆಂದು ತಿಳಿದು ಆಯಾ ವಾರ್ಡ್ ಗಳಿಗೆ ಸಮೀಪದ ಶಾಲೆ, ದೇವಸ್ಥಾನ ಗುರುತಿಸಿ ಮೂರ್ನಾಕು ದಿನದಿಂದ ಶಾಲಾಆವರಣ, ಊರಮ್ಮ ದೇವಸ್ಥಾನ ಮತ್ತು ಇಂದು ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಕೊರೋನಾ ಲಸಿಕೆ ಹಾಕುವಲ್ಲಿ ಆರೋಗ್ಯ ಇಲಾಖೆ ಮುಂದಾಗಿತ್ತು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ, ಸಿಬ್ಬಂದಿ, ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಸೇರಿ ವಾರ್ಡಿನ ಮನೆಮನೆಗೆ ತೆರಳಿ 45ವರ್ಷ ಮೇಲ್ಪಟ್ಟವರನ್ನು ಗುರುತಿಸಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಿ ಲಸಿಕೆ ಹಾಕುವ ಸ್ಥಳದ ಮಾಹಿತಿ ತಿಳಿಸಿ ಲಸಿಕೆ ಹಾಕಿಸಿಕೊಳ್ಳುವವರು ಆಧಾರ್ ಕಾರ್ಡ್ ತೆಗೆದುಕೊಂಡು ಹೋಗುವಂತೆ ತಿಳಿಸಿದರು ಇಂದು 10ಗಂಟೆಯಿಂದ ಸರದಿ ಸಾಲಿನಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುತ್ತಿದ್ದರು.
ಪಟ್ಟಣ ಪಂಚಾಯತಿ ಸದಸ್ಯ ಸಚಿನ್ ಕುಮಾರ್, ಮುಖ್ಯಾಧಿಕಾರಿ ಫಕ್ರುದ್ದೀನ್, ಸಿಬ್ಬಂದಿ ರಾಘವೇಂದ್ರ, ವೀರಮ್ಮ, ನಾಗವೇಣಿ, ಆಶಾಕಾರ್ಯಕರ್ತೆ ಉಮಾ, ಅರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕಿ ಗಿರಿಜಾ ಸೇರಿದಂತೆ ಇತರರಿದ್ದರು.