ಕೂಡ್ಲಿಗಿ ಈದ್ಗಾ ಬಳಿ ಕಾಂಗ್ರೆಸ್ -ಜೆಡಿಎಸ್ ಅಭ್ಯರ್ಥಿಗಳ ಸಮಾಗಮ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.22 :- ಮುಸ್ಲಿಂ ಭಾಂಧವರು ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿ ಪ್ರಾರ್ಥನೆ ಸಲ್ಲಿಸಿ ಹೊರಬರುತ್ತಿರುವ ಮುಸ್ಲಿಂ ಭಾಂಧವರಿಗೆ ಶುಭ ಕೋರಲು ಬಂದಿದ್ದ ಕಾಂಗ್ರೇಸ್ ಜೆಡಿಎಸ್ ಅಭ್ಯರ್ಥಿಗಳ ಸಮಾಗಮವಾಗಿ ಕೈ ಕೈ ಹಿಡಿದು ಮಾತನಾಡಿದ್ದು ವಿಶೇಷವಾಗಿತ್ತು.
ತಿಂಗಳ ಉಪವಾಸ ಮುಗಿಸಿ ಇಂದು ಪವಿತ್ರ ರಂಜಾನ್ ಹಬ್ಬದ ಆಚರಣೆಯ ಮುಖ್ಯ ಭಾಗವಾಗಿರುವ ಈದ್ಗಾ ಕ್ಕೆ ತೆರಳಿ  ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದಾಗಿದ್ದು  ಎಲ್ಲಾ ಮುಸ್ಲಿಂ ಭಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹೊರಬರುತ್ತಿದ್ದಂತೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದ ಪ್ರಮುಖ ಪಕ್ಷಗಳ ಪ್ರತಿಸ್ಪರ್ದಿಗಳಾದ ಕಾಂಗ್ರೇಸ್ ಅಭ್ಯರ್ಥಿ ಡಾ. ಎನ್ ಟಿ ಶ್ರೀನಿವಾಸ ಹಾಗೂ ಜೆಡಿಎಸ್ ಅಭ್ಯರ್ಥಿ  ಕೋಡಿಹಳ್ಳಿ ಪೂಜಾರಿ ಭೀಮಣ್ಣ ಒಬ್ಬರಿಗೊಬ್ಬರು ಭೇಟಿಯಾಗಿದ್ದು ಮುಸ್ಲಿಂ ಭಾಂಧವರಿಗೆ ಹಬ್ಬದ ಶುಭಾಶಯ ಹೇಳುವ ಜೊತೆಗೆ ಚುನಾವಣಾ ಪ್ರತಿಸ್ಪರ್ಧಿಗಳಾದರು ಒಬ್ಬರಿಗೊಬ್ಬರ ಭೇಟಿ ಸಂದರ್ಭದಲ್ಲಿ ಕೈ ಕೈ ಹಿಡಿದು ಆಪ್ತ ಮಿತ್ರರಂತೆ ಮಾತನಾಡಿದ ಸನ್ನಿವೇಶ  ಕಂಡುಬಂದಿತು.  ಚುನಾವಣೆಯಲ್ಲಿ ಮಾತ್ರ ಪ್ರತಿಸ್ಪರ್ದಿಗಳಾಗಬೇಕೇ ಹೊರತು ಉಳಿದಂತೆ ನಾವೆಲ್ಲರೂ ಸ್ನೇಹಿತರಂತೆ ಇರಬೇಕು ಎನ್ನುವ ಸಂದೇಶವನ್ನು ಈ ಇಬ್ಬರು ಅಭ್ಯರ್ಥಿಗಳ ಸಮಾಗಮ ಸಾರಿತು.