ಕೂಡ್ಲಿಗಿ ಆಸ್ಪತ್ರೆಗೆ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಂ ಜಿ ಭೇಟಿ.

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಅ.2  : –   ರಾಜ್ಯದ ಅತೀ ಹಿಂದುಳಿದ ತಾಲೂಕಿನ ಕೇಂದ್ರ ಸ್ಥಳವಾದ ಪಟ್ಟಣದ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಪ್ಲಾಂಟೇಷನ್ ಗೆ ಮಿಷನರಿ ಕೊಡಲು ಮುಂದಾಗಿರುವ ಸರಳ ಸಜ್ಜನಿಕೆಯ, ಶಿಕ್ಷಣ ಪ್ರೇಮಿ, ಉದ್ಯಮಿ, ಕೋವಿಡ್ ಸಂದರ್ಭದಲ್ಲಿ ಅನೇಕ ಆರೋಗ್ಯ ಸಲಕರಣೆ ನೀಡಿ ಪ್ರಚಾರ ಬಯಸದೆ ಇರುವ ಅಜೀಮ್ ಪ್ರೇಂಜಿ ಫೌಂಡೇಶನ್ ಸಂಸ್ಥಾಪಕ ಮತ್ತು ವಿಪ್ರೋ ಕಂಪನಿ ಮುಖ್ಯಸ್ಥ ಅಜೀಮ್ ಪ್ರೇಂಜಿ ಶುಕ್ರವಾರ ಸಂಜೆ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಅನಿರೀಕ್ಷಿತ ಬೇಟಿ ನೀಡಿ ಕೂಡ್ಲಿಗಿ ವೈದ್ಯರುಗಳ ಜೊತೆ ಚರ್ಚಿಸಿದರು.                                                                                                                
ಅಜೀಮ್ ಪ್ರೇಂಜಿ ಫೌಂಡೇಶನ್ ಕಟ್ಟುವ ಮೂಲಕ ಹಿಂದುಳಿದ ಗ್ರಾಮಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು ಎಂದು  ಶಿಕ್ಷಣಕ್ಕೆ ತನ್ನದೇ ಆದ ಮಹತ್ವ ನೀಡಿ ಆ ಶಾಲೆಗಳ ಸಮಸ್ಯೆ ಅರಿತು ಅಲ್ಲಿಗೆ ಶೈಕ್ಷಣಿಕವಾಗಿ ಬೇಕಾದ ಸಲಕರಣೆ ನೀಡಿ ಶಿಕ್ಶಣಕ್ಕೆ ಉತ್ತೇಜನ ನೀಡುವ  ಮತ್ತು ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಕ್ಕೆ ಸಂಬಂಧಿಸಿದಂತೆ ಪ್ರತಿ ಆಶಾ ಕಾರ್ಯಕರ್ತರಿಗೆ ಥರ್ಮಲ್ ಸ್ಕ್ಯಾನ್ ನೀಡಿ ಪ್ರತಿಯೊಬ್ಬರ ಆರೋಗ್ಯದ ಮಹತ್ವ ನೀಡುವ ಕಾರ್ಯಕ್ರಮದ ಖರ್ಚು ವೆಚ್ಚ ಭರಿಸುವ ಮೂಲಕ ಆರೋಗ್ಯಕ್ಕೂ ತಮ್ಮದೇ ಆದ ಕೊಡುಗೆ ನೀಡಿದ ಅಜೀಮ್ ಪ್ರೇಂಜಿ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಅನಿರೀಕ್ಷಿತ ಬೇಟಿ ನೀಡಿ ಆಕ್ಸಿಜನ್ ಪ್ಲಾಂಟೇಷನ್ ನ ಸ್ಥಳ ಪರಿಶೀಲನೆ ನಡೆಸಿ ಆಸ್ಪತ್ರೆಯಲ್ಲಿರುವ ಸಮಸ್ಯೆಗಳ ಬಗ್ಗೆ ಆಲಿಸಲಾಗಿ ಓಪಿಡಿಗೆ ಸಂಬಂಧಿಸಿದಂತೆ ಇನ್ನೊಂದು ಫ್ಲೋರ್ ಕಟ್ಟಡ ಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದು ಅದನ್ನು ಮಾಡಿಕೊಡುವ ಭರವಸೆ ನೀಡಿದ್ದಾರೆಂದು ತಿಳಿದಿದೆ. 
ಕುಳಿತುಕೊಳ್ಳುವ ಕುರ್ಚಿಯಲ್ಲೂ ಸರಳತೆ :- ಸಾರ್ವಜನಿಕ ಕೂಡ್ಲಿಗಿ ಆಸ್ಪತ್ರೆಗೆ ಅನಿರೀಕ್ಷಿತವಾಗಿ ಬೇಟಿ ನೀಡಿದ ಅಜೀಮ್ ಪ್ರೇಂಜಿ ಫೌಂಡೇಶನ್ ಸಂಸ್ಥಾಪಕ ಮತ್ತು ವಿಪ್ರೋ ಕಂಪನಿ ಮುಖ್ಯಸ್ಥ ಅಜೀಮ್ ಪ್ರೇಂಜಿ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಹಾಕಿದ್ದ ಮಾಮೂಲು ಕುರ್ಚಿಯ  ಮೇಲೆ ಕುಳಿತು ಸರಳತೆ ಮೆರೆದರು. ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಷಣ್ಮುಖನಾಯ್ಕ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿನಯ ಸೇರಿದಂತೆ ಇತರೆ ವೈದ್ಯರು ಹಾಗೂ ಸಿಬ್ಬಂದಿ ಹಾಗೂ ಅಜೀಮ್ ಪ್ರೇಂಜಿ ಫೌಂಡೇಶನ್ ನ ಮೈಥಿಲಿ ಸೇರಿದಂತೆ ಇತರರಿದ್ದರು.                                                        ಇದಕ್ಕೂ ಮೊದಲು  ತಾಲೂಕಿನ ಗಡಿಗ್ರಾಮ ಹುಡೇಂ ಮತ್ತು ಲೋಕೀಕೆರೆ ಗ್ರಾಮಕ್ಕೆ  ಅಜೀಂ ಪ್ರೇಂ ಜಿ ಪೌಂಡೇಷನ್ ನ ಸಂಸ್ಥಾಪಕರಾದ ಹಾಗು ವಿಪ್ರೂ ಕಂಪನಿಯ ಮುಖ್ಯಸ್ಥ ಅಜೀಂ ಪ್ರೇಂ ಜೀಯವರು ಭೇಟಿ ನೀಡಿ ಗಡಿಗ್ರಾಮ ಹುಡೇಂ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಇಲಾಖೆಯ ಸಿಬ್ಬಂದಿ ಯೊಂದಿಗೆ ಚರ್ಚೆ ನಡೆಸಿದರು ಅಲ್ಲದೆ  ಆರೋಗ್ಯ ರಕ್ಷಣಾ ವ್ಯವಸ್ಥೆ ಹೇಗಿದೆ ಹಾಗೂ ನಮ್ಮ ಸಂಸ್ಥೆಯಿಂದ ನೀಡಲಾದ ಪರಿಕರಗಳು ಹೇಗೆ ಕೆಲಸ ಮಾಡುತ್ತಿವೆ ಎಂದು ಮಾಹಿತಿ ಪಡೆದರು. ಈ ವೇಳೆ ಗ್ರಾಮಸ್ಥರು ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ  ಇರುವ ಬಗ್ಗೆ ತಿಳಿಸಿದರು. ನಂತರ ತಮ್ಮ ಸಂಸ್ಥೆಯಿಂದ ಉಪ ಆರೋಗ್ಯ ಕೇಂದ್ರ ತೆರೆಯುವಂತೆ ಕೋರಿದರು. ನಂತರ ಲೋಕೀಕೆರೆ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ‌ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಅಜೀಂ ಪ್ರೇಂಜಿ  ಅವರ ಮುಂದೆ ಗ್ರಾಮದ ಮಕ್ಕಳ ಕಲಿಕೆ ಹಿಂದುಳಿದಿದ್ದು ಪ್ರಗತಿಗಾಗಿ ಏನಾದರೂ ಮಾಡಿ ಹಾಗೂ ಲೋಕೀಕೆರೆ ಗ್ರಾಮದಲ್ಲಿ 2400 ಜನರಿದ್ದು ಏನಾದರೂ ಆರೋಗ್ಯ ಸಮಸ್ಯೆ ಆದರೆ ಆಸ್ಪತ್ರೆ ಗೆ ಹೋಗಲು ತೊಂದರೆಯಾಗದಂತೆ ಆಸ್ಪತ್ರೆ ಕಲ್ಪಿಸುವಂತೆ ಮನವಿ ಮಾಡಿದರು. 
ಈ ಸಂದರ್ಭಗಳಲ್ಲಿ ಡಾ. ಶಿವಲಿಂಗಪ್ಪ, ಡಾ ಧರ್ಮಸಿಂಗ್  ಸಿಬ್ಬಂದಿ ಧನಂಜಯ, ಭಾಗ್ಯಮ್ಮ, ಲಿಂಗರಾಜ, ತಾಪಂ‌ ಸದಸ್ಯ ಪಾಪನಾಯ್ಕ, ಗ್ರಾಪಂ ಮಾಜಿ ಅದ್ಯಕ್ಷ ಮಂಜುನಾಥ ಹಾಗೂ ಆರೋಗ್ಯ ಇಲಾಖೆಯ ಚಂದ್ರಪ್ಪ, ಶಿವಪ್ರಕಾಶ, ಮಲ್ಲಿಕಾ, ಹಾಗೂ ಲೋಕೀಕೆರೆ ಗ್ರಾಮದ ಶ್ರೀನಿವಾಸ ರೆಡ್ಡಿ, ದೊರೆ, ವಲಸೆ ಪಾಪಣ್ಣ,ತಿಪ್ಪೇರುದ್ರಪ್ಪ, ಶಿಕ್ಷಕ ರೇಣುಕಾರಾದ್ಯ, ಸಂಸ್ಥೆಯ ಮಹೇಂದ್ರ ಸೇರಿದಂತೆ ಆಶಾ ಕಾರ್ಯಕರ್ತೆ ಯರು, ಗ್ರಾಮದ ಮುಖಂಡರು ಇದ್ದರು.
ಕೋಟ್
ಅಜೀಂ‌ ಪ್ರೇಂ‌ಜಿ‌ ಮಾತನಾಡಿ ಇ ವರೆಗೂ ಕೆಲ ಹಳ್ಳಿಗಳಲ್ಲಿ ಕರೋನ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಕಡಿಮೆ ಇದೆ ಅಂತಹ ಜನರಿಗೆ ಮನವೊಲಿಸಿ ಲಸಿಕೆ ಹಾಕಿಸಿಕೊಳ್ಳಲು ಜಾಗೃತಿ ಅರಿವು  ಮೂಡಿಸಿ ಎಂದರು.