ಕೂಡ್ಲಿಗಿ : ಆರ್ಯವೈಶ್ಯ ಸಮುದಾಯದಿಂದ  ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 26 :- ಅಧಿಕಶ್ರಾವಣ ಮಾಸದ ಪ್ರಯುಕ್ತ   ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸಮುದಾಯದ  ಜೋಡಿ ದಂಪತಿಗಳಿಂದ ಸಾಮೂಹಿಕವಾಗಿ  ‘ಶ್ರೀಸತ್ಯನಾರಾಯಣ ಸ್ವಾಮಿಗೆ ವಿಶೇಷವಾದ  ಪೂಜೆಯನ್ನು ನೆರವೇರಿಸಲಾಯಿತು.
ಈ ವೇಳೆ ಆರ್ಯವೈಶ್ಯ ಸಮಾಜದ ರಂಗನಾಥಸ್ವಾಮಿ ಇವರು ಮಾತನಾಡಿ     “ಶ್ರೀ ಸತ್ಯನಾರಾಯಣ ಸ್ವಾಮಿಯ ಮಹಾತ್ಮೆ ” ಯನ್ನು ಅತ್ಯಂತ ಸರಳವಾಗಿ ಎಲ್ಲರ ಮನಮುಟ್ಟುವಂತೆ ವಿವರಿಸುತ್ತಾ ಈ ಅಧಿಕ ಮಾಸದಲ್ಲಿ ಯಾವುದೇ ಪೂಜಾ ಕಾರ್ಯಕ್ರಮಗಳನ್ನು ಮಾಡಿದರೂ ಎಲ್ಲ ಮುಕ್ಕೋಟಿ ದೇವತೆಗಳಿಗೆ ಸಲ್ಲಿಸಿದಂತಾಗುತ್ತದೆ. ಈ ಅಧಿಕ ಮಾಸದಲ್ಲಿ ಮಾಡುವ ಎಲ್ಲಾ ಪೂಜೆಗಳು ಅತ್ಯಂತ ಶ್ರೇಷ್ಟವಾದವು ಎಂದರು.
ಸಮುದಾಯದ   ಗಂಟಿ  ಇಂದ್ರಾವಾತಮ್ಮ ಮತ್ತು ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷೆ   ಗಂಟಿ  ಸವಿತಾ ಮುರಳಿಧರ ಇವರಿಗೆ ಮಡಿಲಕ್ಕಿ ಕಾರ್ಯಕ್ರಮ ನಡೆಸಿ ಇದೇ ಸಂದರ್ಭದಲ್ಲಿ
ಆರ್ಯವೈಶ್ಯ ಸಮಾಜದ ಅಧ್ಯಕ್ಷರು ಹಾಗೂ ಹಿರಿಯ ದಂಪತಿಗಳಾದ  ಗಂಟಿ ತಿಪ್ಪೇಸ್ವಾಮಿ ಶ್ರೇಷ್ಟಿ ಮತ್ತು ಇಂದ್ರಾವಾತಮ್ಮ ಇವರುಗಳನ್ನು ಆರ್ಯವೈಶ್ಯ ಸಮಾಜದಿಂದ  ಸನ್ಮಾನಿಸಿ ಗೌರವಿಸಲಾಯಿತು