ಕೂಡ್ಲಿಗಿ ಆರೋಗ್ಯ ಇಲಾಖೆಯಿಂದ ಋತುಚಕ್ರ ನೈರ್ಮಲ್ಯ ದಿನಾಚರಣೆ, ಕಿಶೋರಿಯರಿಗೆ ಅರಿವು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.29 :- ಹದಿಹರೆಯದ ಕಿಶೋರಿಯರಿಗೆ ಋತುಚಕ್ರ ಕುರಿತು ಅರಿವು ನೀಡುವ ಮೂಲಕ ಅಂತರಾಷ್ಟ್ರೀಯ ಋತುಚಕ್ರ ನೈರ್ಮಲ್ಯ ದಿನಾಚರಯನ್ನು ಕೂಡ್ಲಿಗಿ ಆರೋಗ್ಯ ಇಲಾಖೆಯಿಂದ ಆಚರಿಸಲಾಯಿತು.
ಪಟ್ಟಣದ ಆಜಾದ್ ನಗರದ  ಅಂಗನವಾಡಿ ಎ ಕೇಂದ್ರದಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯನಗರ, ಕೂಡ್ಲಿಗಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಆರ್ ಕೆ ಎಸ್ ಕೆ. ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ ಸಹಭಾಗೀತ್ವದಲ್ಲಿ ಆಯೋಜಿಸಲಾಗಿದ್ದ  ಅಂತರಾಷ್ಟ್ರೀಯ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮವನ್ನು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯ ದಂತ ವೈದ್ಯೆ ಡಾ ರಮ್ಯ  ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಋತುಚಕ್ರವು ನೈಸರ್ಗಿಕ  ಸಹಜ ಪ್ರಕ್ರಿಯೆಯಾಗಿದ್ದು ಇದರ ಬಗ್ಗೆ ಹದಿಹರೆಯದ ಕಿಶೋರಿಯರು ಈ ಕ್ರಿಯೆಯ ಹಾಗೂ ಅದರ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿಕೊಳ್ಳುವ ಅಗತ್ಯವಿದೆ ಮತ್ತು ರಕ್ತಹೀನತೆಗೆ ಪೌಷ್ಟಿಕ ಆಹಾರ ಕುರಿತು ಐಎಫ್ ಎ ಮಾತ್ರೆಗಳನ್ನು ಸೇವಿಸುವಂತೆ ಡಾ ರಮ್ಯ ಕಿಶೋರಿಯರಿಗೆ ಆರೋಗ್ಯದ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಆರ್ ಕೆ ಎಸ್ ಕೆ .ಆಪ್ತ ಸಮಾಲೋಚಕ ಒಬಣ್ಣ ಎನ್ ಸಿ ಡಿ  ಆಪ್ತ ಸಮಾಲೋಚಕರರಾದ  ಎಂ ನಾಗರತ್ನ. ಆಶಾಮೆಂಟರ್ ಲತಾ ಪಿಹೆಚ್ ಸಿ ಓ  ಸುನೀತ, ಗಿರಿಜಾ, ಆಶಾ ಕಾರ್ಯಕರ್ತರಾದ .ಸಾವಿತ್ರಿ ಉಮಾ  ಲತಾ ಹಾಗೂ ಕಿಶೋರಿಯರ ತಾಯಂದಿರು ಮತ್ತು  ಕಿಶೋರಿಯರು ಭಾಗವಹಿಸಿದ್ದರು.

One attachment • Scanned by Gmail