ಕೂಡ್ಲಿಗಿ ಅರಣ್ಯಇಲಾಖೆಯಿಂದ ವನ್ಯಜೀವಿ, ಮಾನವ ನಡುವಿನ ಸಂಘರ್ಷ ತಡೆಗಟ್ಟುವ ಜಾಗೃತಿ ಕಾರ್ಯಕ್ರಮ

ಕೂಡ್ಲಿಗಿ.ಜ.9:- ಅರಣ್ಯ ಪ್ರದೇಶ ಹಾಗೂ ಸಮೀಪದ ಪ್ರದೇಶದಲ್ಲಾಗುವ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ತಡೆಗಟ್ಟುವಲ್ಲಿ ಕೂಡ್ಲಿಗಿ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಮುಖ್ಯ ಪ್ರದೇಶಗಳನ್ನು ಗುರುತಿಸಿ ಅಂತಹ ಗ್ರಾಮಗಳಲ್ಲಿ ಇಂದು ಬೆಳಿಗ್ಗೆಯಿಂದ ಜಾಗೃತಿ ಕಾರ್ಯಕ್ರಮ ನಡೆಸಲು ಮುಂದಾಗಿದೆ.
ಅರಣ್ಯ ಇಲಾಖೆಯ ಬಳ್ಳಾರಿ ವಲಯ ಮತ್ತು ಕೂಡ್ಲಿಗಿ ಉಪವಲಯದ ವತಿಯಿಂದ ಅರಣ್ಯ ಮತ್ತು ವನ್ಯಜೀವಿ ಸಂಕುಲಗಳನ್ನು ಕಾಡ್ಗಿಚ್ಚಿನಿಂದ ರಕ್ಷಿಸುವುದು ಮತ್ತು ವನ್ಯಜೀವಿ ಮತ್ತು ಮಾನವ ನಡುವಿನ ಸಂಘರ್ಷ ತಡೆಗಟ್ಟುವ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ನಂತರ ಕೂಡ್ಲಿಗಿ ತಾಲೂಕಿನ ನಾಗಲಾಪುರ, ಪಾಲಯ್ಯನಕೋಟೆ, ಸಿರಿಬಿ, ಜರ್ಮಲಿಯಲ್ಲಿ ಜಾಗೃತಿ ಕಾರ್ಯಕ್ರಮ ಇಂದು ನಡೆಸಲಾಯಿತು.
ಇಂದು ಬೆಳಿಗ್ಗೆ ಬಂಡ್ರಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಾವು ಮತ್ತು ನಾನು ಸಂಸ್ಥೆಯ ವಿಪಿನ್ ರಾಯ್ ಹಾಗೂ ಸ್ಫೂರ್ತಿ ಇವರಿಂದ ಹಾವು ಕಡಿತದಿಂದ ತಪ್ಪಿಸಿಕೊಳ್ಳುವುದು ಮತ್ತು ಅವುಗಳಿಂದ ನಮ್ಮ ರಕ್ಷಣೆ ಯಾವ ರೀತಿ ಮಾಡಿಕೊಳ್ಳುವ ಬಗ್ಗೆ ಸವಿವರವನ್ನು ನೀಡಿದರು. ಹಾಗೂ ದಟ್ಟ ಅರಣ್ಯದಲ್ಲಿ ವನ್ಯಜೀವಿಗಳಿರುವ ಪ್ರದೇಶದಲ್ಲಿ ಕಾಡ್ಗಿಚ್ಚು ಕಂಡಲ್ಲಿ ವನ್ಯಜೀವಿಗಳನ್ನು ಯಾವ ರೀತಿ ಸಂರಕ್ಷಣೆ ಮಾಡಬೇಕು ಮತ್ತು ಮಾನವನ ಮೇಲೆ ಎರಗುವ ಹಾಗೂ ಮಾನವ ವನ್ಯಜೀವಿಗಳನ್ನು ಕೊಲ್ಲುವುದನ್ನು ಯಾವರೀತಿ ತಡೆಗಟ್ಟಬೇಕು ಎಂದು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಕೆಲ ಗ್ರಾಮಗಳ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೂಡ್ಲಿಗಿ ಅರಣ್ಯ ಇಲಾಖೆ ಮುಂದಾಗಿ ಸಂಬಂದಿಸಿದ ವಿಡಿಯೋ ತೋರಿಸುವ ಮೂಲಕ ಈ ಕಾರ್ಯಕ್ರಮ ಆಯೋಜಿಸಿತ್ತು ಬಂಡ್ರಿ ನಂತರ ಕೂಡ್ಲಿಗಿ ತಾಲೂಕಿನ ವ್ಯಾಪ್ತಿಯ ನಾಗಲಾಪುರ, ಪಾಲಯ್ಯನಕೋಟೆ, ಸಿರಿಬಿ ಮತ್ತು ಜರ್ಮಲಿ ಗ್ರಾಮದಲ್ಲಿ ಈ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು ಜನರಲ್ಲಿ ವನ್ಯಜೀವಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಕೂಡ್ಲಿಗಿ ಹಾಗೂ ಗುಡೇಕೋಟೆ ಕರಡಿಧಾಮದ ಉಪವಲಯ ಅರಣ್ಯಾಧಿಕಾರಿ ರೇಣುಕಮ್ಮ, ಕೂಡ್ಲಿಗಿ ಉಪಅರಣ್ಯಾಧಿಕಾರಿ ಕುಬೇರ, ಅರಣ್ಯ ರಕ್ಷಕರಾದ ಗೋವಿಂದಪ್ಪ, ಗಂಗಾಧರ, ನಾಗರಾಜ ಮಾಣಿಗರ, ಚಾಲಕ ಗಣೇಶ ಸೇರಿದಂತೆ ಅರಣ್ಯ ಸಿಬ್ಬಂದಿ ಇದ್ದರು.