
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ. 15 :- ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಈ ಭಾರಿ ಪ್ರತಿಷ್ಠೆಯ ಕ್ಷೇತ್ರವಾಗಿದ್ದು ಕಾಂಗ್ರೇಸ್ ಅಭ್ಯರ್ಥಿ ಡಾ.ಎನ್ ಟಿ ಶ್ರೀನಿವಾಸಗೆ ಹೈಕಮಾಂಡ್ ಟಿಕೇಟ್ ಘೋಷಣೆ ಮಾಡಿದ್ದಲ್ಲದೆ ಅಧಿಕೃತವಾಗಿ ಚುನಾವಣಾ ನಾಮಪತ್ರ ಸಲ್ಲಿಸಲು ಕಾಂಗ್ರೆಸ್ ನ ಬಿ ಫಾರಂ ಸಹ ಶುಕ್ರವಾರ ನೀಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರು ಶುಕ್ರವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೂಡ್ಲಿಗಿ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಯಾದ ಡಾ ಎನ್ ಟಿ ಶ್ರೀನಿವಾಸಗೆ ಬಿ ಫಾರಂ ನೀಡಿದರು ಹಾಗೂ ಅವರ ಆಶೀರ್ವಾದ ಪಡೆದ ಅಭ್ಯರ್ಥಿ ಶ್ರೀನಿವಾಸ ಮಾತನಾಡಿ ಭಾರತದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ಜನ್ಮದಿನವಾದ ಶುಕ್ರವಾರದಂದು ನನಗೆ ಪಕ್ಷದ ಬಿ ಫಾರಂ ಸಲ್ಲಿಕೆಯಾಗಿದ್ದು ಅಂಬೇಡ್ಕರ್ ರ ಆಶಯದ ಸಮಸಮಾಜದ ನಿರ್ಮಾಣಕ್ಕೆ ಬದ್ಧನಾಗಿ ಪ್ರತಿಯೊಬ್ಬರ ಏಳ್ಗೆಗೆ ಶ್ರಮಿಸುವೆ ಎಂದು ತಿಳಿಸಿದ ಡಾ ಶ್ರೀನಿವಾಸ ಸೋಮವಾರದಂದು ನಾಮಪತ್ರ ಸಲ್ಲಿಸುವ ಮಾಹಿತಿಯನ್ನು ಹೊರಹಾಕಿದ್ದಾರೆ.
One attachment • Scanned by Gmail