ಕೂಡ್ಲಿಗಿ : ಅಂತರಾಷ್ಟ್ರಿಯ ಯುವ ದಿನಾಚರಣೆ

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ. 25 :- ಕನಾ೯ಟಕ ರಾಜ್ಯ ಏಡ್ಸ್ ಪ್ರಿವೆನ್ಷಿಯನ್ ಸೊಸೈಟಿ ಬೆಂಗಳೂರು ಜಿಲ್ಲಾ ಹೆಚ್.ಐ.ವಿ/ಏಡ್ಸ್ ನಿಯಂತ್ರಣ ಮತ್ತು ನಿವಾ೯ಹಕ ಘಟಕ ಬಳ್ಳಾರಿ ಹಾಗೂ ಜ್ಞಾನ ಮಂಟಪ ಎಜುಕೇಷನಲ್  ಟ್ರಸ್ಟ್ ಕೂಡ್ಲಿಗಿ ಜ್ಞಾನ ಮಂಟಪ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಜ್ಞಾನ ಮಂಟಪ ರೆಸಿಡಿನ್ಸಿಯಲ್ ಸ್ಕೂಲ್ ಗುಂಡಿನ ಹೊಳೆ ಸಂಯುಕ್ತಾಶ್ರಯದಲ್ಲಿ ಜ್ಞಾನ ಮಂಟಪ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ  ಅಂತಾರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.                                                                                                                                        ಪಟ್ಟಣ ಪಂಚಾಯಿತಿ ಸದಸ್ಯರಾದ  ಸರಸ್ವತಿ ರಮೇಶ್ ಏ.ಡಿ.ಗುಡ್ಡ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ನಂತರ  ಡ್ಯಾಪ್ಕು ಬಳ್ಳಾರಿ ಜಿಲ್ಲಾ ಮೇಲ್ವಿಚಾರಕರಾದ ಬಿ ಗಿರೀಶ್ ರವರು ಉಪನ್ಯಾಸವನ್ನು ನೀಡುತ್ತಾ ಸ್ವಾಮಿ ವಿವೇಕಾನಂದರ ವಿಚಾರಗಳಿಂದ ನಾವು ಪ್ರಭಾವಿತರಾಗಿ ಸೈದ್ಧಾಂತಿಕವಾಗಿ ಬೌದ್ಧಿಕವಾಗಿ ಮನೋಬಲ ಆತ್ಮಬಲಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಏನಾದರೂ ಸಾಧನೆ ಮಾಡಲಿಕ್ಕೆ ಸಾಧ್ಯತೆ ಇದೆ ಎಂದು ಹೇಳಬಹುದು ಎಂದು ಹಾಗೆಯೇ ಹೆಚ್.ಐ.ವಿ/ಏಡ್ಸ್ ಲಕ್ಷಣಗಳು ಬಾರದಂತೆ ತಡೆಯಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಬಂದ ನಂತರವೂ ಏನೆಲ್ಲಾ ಚಿಕಿತ್ಸೆಯ ಬಗ್ಗೆ ಯಾವ ರೀತಿ ಅನುಪಾಲನೆ ಮಾಡಬೇಕು ಎಂದು ಹೆಚ್.ಐ.ವಿ/ಏಡ್ಸ್ ಹೊಂದಿರುವವರಿಗೆ ಏನೆಲ್ಲಾ ಸಕಾ೯ರಿ ಸೌಲಭ್ಯಗಳು ಇವೆ ಎಂದು ಸುದೀರ್ಘ ಕಾಲ ಮಾಹಿತಿ ನೀಡಿದರು.                                                                                                                      ಪ್ರಾಸ್ತಾವಿಕವಾಗಿ ಕೆ. ಪ್ರಶಾಂತ ಕುಮಾರ ಕೆ ಮಾತನಾಡಿದರು ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ  ಚಾರೇಶ್ ಬಿ ರವರು ಮಾತನಾಡುತ್ತಾ ಈ ರೀತಿ ಕಾರ್ಯಕ್ರಮಗಳು ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಜೊತೆಗೆ ಸಾಂಸ್ಕೃತಿಕ  ಚಟುವಟಿಕೆಗಳಲ್ಲಿ ಹಾಗೂ ಸಮಾಜ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಆಗುತ್ತದೆ ಎಂದು ಆಶಿಸುತ್ತಾ ಹೇಳಿದರು.                                                                                
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಶಿವಾನಂದ, ಗೊಲಿ೯ ನಾಗರಾಜ ಸೌಖ್ಯ ಬೆಳಕು ಸಮುದಾಯ ಸೇವಾ ಸಂಸ್ಥೆಯ ಆಪ್ತಸಮಾಲೋಚಕರಾದ ಬಿ. ರವೀಕುಮಾರ  ಕಾಲೇಜಿನ ಇತರೆ ಸಿಬ್ಬಂದಿಗಳು ಭಾಗವಹಿಸಿ  92 ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಕಾಯ೯ಕ್ರಮ ಯಶಸ್ವಿ ಗೊಳಿಸಿದರು. ಹೊನ್ನಾಪುರ ಸ್ವಾಮಿ ಮತ್ತು ಸಂಗಡಿಗರು ಪ್ರಾರ್ಥಿಸಿದರು   ಹರೀಶ್ ಸ್ವಾಗತಿಸಿದರು. ಶಂಕರನಾಗ್ ಜಿ.ಪಿ ನಿರೂಪಿಸಿದರು. ಮತ್ತು ಈ ಸಂದರ್ಭದಲ್ಲಿ ರಕ್ತದಾನ ಶಿಬಿರ ಸಹ ಆಯೋಜನೆ ಮಾಡಲಾಗಿತ್ತು.