ಕೂಡ್ಲಿಗಿ ಅಂಚೆ ಇಲಾಖೆಯಿಂದ   ಎಂಎಸ್ ಎಸ್ ಸಿ  ಮತ್ತು ಪಿಪಿಎಫ್  ಅಭಿಯಾನ,


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 25 :- ಹೆಣ್ಣು ಮಗು ಹಾಗೂ ಮಹಿಳೆಯರ ಸುರಕ್ಷತೆಗಾಗಿ ಪ್ರಧಾನಿಯವರ ಕಂಡ ಕನಸು ನನಸು ಮಾಡಲು ಅಂಚೆ ಇಲಾಖೆಯು  ಪ್ರಧಾನ ಮಂತ್ರಿಗಳು ಘೋಷಿಸಿದ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ನ್ನು ಈ ದೇಶದ ಪ್ರತಿಯೊಬ್ಬ ಹೆಣ್ಣು ಮಗು ಮತ್ತು ಮಹಿಳೆಗೆ ತಲುಪಿಸಲು ಇಂದು ಕೂಡ್ಲಿಗಿಯಲ್ಲಿ ಅಂಚೆ ಪಾಲಕರಾದ ಅಂಚೆ ಕೊಟ್ರೇಶ್ ಅವರ ನೇತೃತ್ವದಲ್ಲಿ ಅಂಚೆ ಇಲಾಖೆ ಎಲ್ಲಾ ಸಿಬ್ಬಂದಿಗಳು ಇಡೀ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಮಹಿಳಾ ಸಮ್ಮಾನ್ ಶೇವಿಂಗ್ ಸರ್ಟಿಫಿಕೇಟ್ ಹಾಗೂ ಸಾರ್ವಜನಿಕ ಭವಿಷ್ಯ ನಿಧಿ ಎಂ ಎಸ್ ಎಸ್ ಸಿ ಹಾಗೂ ಪಿಪಿಎಫ್ ಖಾತೆಗಳನ್ನು ತೆರೆಯಬೇಕೆಂದು ಜನರನ್ನು ಜಾಗೃತಗೊಳಿಸಿದರು.
ಪಟ್ಟಣದ ರಾಮನಗರ ಹಾಗೂ ರಾಜೀವಗಾಂಧಿನಗರ ವ್ಯಾಪ್ತಿಯಲ್ಲಿ ಎರಡು ತಂಡಗಳನ್ನು ಆಂಚೆ ಇಲಾಖೆ ಸಿಬ್ಬಂದಿ ರಚಿಸಿಕೊಂಡು ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಎಂಎಸ್ ಎಸ್ ಸಿ ಎನ್ನುವ ಈ ಖಾತೆ ಬರೀ ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗೆ ಮೀಸಲಾಗಿದ್ದು ಎಲ್ಲಾ ವಯೋಮಾನದವರಿಗೂ ಇದು ಅನ್ವಯವಾಗುತ್ತದೆ, ಇದರ ವಾರ್ಷಿಕ ಬಡ್ಡಿ ದರ 7.5 % ಆಗಿದ್ದು ಕನಿಷ್ಠ 1000 ಮತ್ತು ಗರಿಷ್ಠ 2 ಲಕ್ಷ ರೂಪಾಯಿಗಳನ್ನು ಬಂಡವಾಳವಾಗಿ ಹೂಡಬಹುದು, ಇದರ ಅವಧಿ ಕೇವಲ ಎರಡು ವರ್ಷಗಳು ಮಾತ್ರ ಎಂದು ತಿಳಿಸುತ್ತಾ
 ಸಾರ್ವಜನಿಕ ಭವಿಷ್ಯ ನಿಧಿ ಪಿಪಿಎಫ್ ( ಪಬ್ಲಿಕ್ ಪ್ರೌಢೆಂಟ್ ಫಂಡ್ ) ಇದು ಈ ದೇಶದ ಎಲ್ಲಾ ಪ್ರಜೆಗಳಿಗೂ ಅನ್ವಯವಾಗುತ್ತದೆ, ಇದಕ್ಕೆ ವಯಸ್ಸಿನ ಮಿತಿ ಇಲ್ಲ, ಇದರ ಕಾಲಾವಧಿ 15 ವರ್ಷಗಳು ಮತ್ತು ಈ ಖಾತೆಯನ್ನು ಮುಂದಿನ ಹದಿನೈದು ವರ್ಷದವರೆಗೆ ಮುಂದುವರಿಸಬಹುದು, ಇದರ ವಾರ್ಷಿಕ ಬಡ್ಡಿ ದರ 7.1, %, ಇದರ ಹೂಡಿಕೆ ಕನಿಷ್ಠ 500 ರೂಪಾಯಿ ಮತ್ತು ವಾರ್ಷಿಕ ಒಂದುವರೆ ಲಕ್ಷ ರೂಪಾಯಿಗಳು ಮಾತ್ರ, ಎಂದು ಜನರಿಗೆ ತಿಳುವಳಿಕೆ ಮೂಡಿಸುವ ಅಭಿಯಾನವನ್ನು ಇಂದು ಕೂಡ್ಲಿಗಿ ಅಂಚೆ ಇಲಾಖೆ ಈ  ಅಭಿಯಾನ ನಡೆಸಿತು.
 ಈ  ಅಭಿಯಾನದಲ್ಲಿ ಅಂಚೆ ಸಹಾಯಕರಾದ  ಸುರೇಶ್ ಕುಮಾರ್, ಎಲ್, ಎಸ್, ಜಂತಕಲ್ ಮಂಜುನಾಥ, ಅಂಚೆ ಮೇಲ್ವಿಚಾರಕರಾದ ಕೆ ಎಂ  ರವಿಕುಮಾರ್, ಪೋಸ್ಟ್ ಮನ್ ಳಾದ ಬಿ,ಪರಸಪ್ಪ, ಎ ಕೆ  ಕೊಟ್ರೇಶ್, ಕುರಿ ಚಿಕ್ಕಪ್ಪ, ಜಿಡಿಎಸ್ ಗಳಾದ ಹುಲಿ ರಾಜ, ಅಜ್ಜಯ್ಯ, ಸಂಜನಾ, ಜರ್ಮಲಿ ಜೆ ಕೆ ಈಶಪ್ಪ, ಬಡೇಲಡಕು ಕಾವ್ಯ,ಕುಪ್ಪಿನಕೆರೆ ಅನ್ನಪೂರ್ಣ,ಹಿರೇಹೆಗ್ದಾಳ್  ರಾಧಿಕಾ, ಶಿವಪುರದ ಐಶ್ವರ್ಯ, ಅಮರ ದೇವರ ಗುಡ್ಡದ ಅನುಷಾ , ಮಂಜುನಾಥ, ಹನಸಿ ಟಿ ಮೋಹಿದ್ದೀನ್, ಚೌಡಾಪುರದ ಸಿದ್ದೇಶ್ ಉಲ್ಲಾಸ್, ಭಾಗವಹಿಸಿದ್ದರು.