ಕೂಡ್ಲಿಗಿಯ ಓಣಿಗಳಲ್ಲಿ ರೆಕ್ಕೆಬಿಚ್ಚಿ ಹಾರಾಡಿದ ನವಿಲುಗಳು.

ಕೂಡ್ಲಿಗಿ.ಜೂ. 5:- ಅರಣ್ಯ ಭಾಗದಲ್ಲಿ ಸ್ವಚ್ಛಂದವಾಗಿ ಬದುಕುತ್ತಿದ್ದ ಪ್ರಾಣಿಪಕ್ಷಿಗಳು ಆಹಾರಕ್ಕಾಗಿ ಗ್ರಾಮಗಳತ್ತ ಬರುತಿದ್ದು ಇಂದು ಬೆಳಿಗ್ಗೆ ಪಟ್ಟಣದ ಆಶ್ರಯ ಕಾಲೋನಿಯ ಮನೆಗಳ ಹತ್ತಿರ ಎರಡು ನವಿಲುಗಳು ಮನೆಯಿಂದ ಮನೆಗೆ ರೆಕ್ಕೆ ಬಿಚ್ಚಿ ಹಾರಾಡುತ್ತಿದ್ದ ಪ್ರಸಂಗ ಮೊಬೈಲ್ ಕ್ಯಾಮರಾದ ಕಣ್ಣಿಗೆ ಸೆರೆಯಾಗುವ ಜೊತೆಗೆ ಲಾಕ್ ಡೌನ್ ನಿಂದ ಮನೆಯಲ್ಲಿರುವ ಜನತೆ ಮನೆಮುಂದೆ ಬಂದ ನವಿಲುಗಳನ್ನು ನೋಡಿ ಸಂತಸ ವ್ಯಕ್ತಪಡಿಸುವ ಜೊತೆಗೆ ಲಕ್ಷ್ಮಿದೇವಿ ಎಂಬುವವರ ಮಕ್ಕಳು ಮತ್ತು ಮೊಮ್ಮಕ್ಕಳು ನವಿಲಿನ ಚಿತ್ತಾರ ಸೆರೆಹಿಡಿದು ಪತ್ರಿಕಾ ಪ್ರತಿನಿಧಿ ಗಮನಕ್ಕೆ ತಂದಿದ್ದಾರೆ.
ಕೂಡ್ಲಿಗಿ ತಾಲೂಕಿನಲ್ಲಿ ನವಿಲಿನ ಸಂತತಿ ಹೆಚ್ಚಾಗಿದ್ದು ಈಗ ಹೊಲಗಳಲ್ಲಿ ಬೆಳೆ ಇಲ್ಲದೆ ಇದ್ದು ನವಿಲುಗಳಿಗೆ ಆಹಾರವಿಲ್ಲದೆ ಪಟ್ಟಣದತ್ತ ಆಹಾರ ಹುಡುಕಿಕೊಂಡು ಬಂದಿರಬಹುದೆಂದು ಹೇಳಬಹುದಾಗಿದೆ.