ಕೂಡ್ಲಿಗಿಯ ಓಣಿಓಣಿಯಲ್ಲೂ ಚಿಣ್ಣರ ಬಣ್ಣದೋಕುಳಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.9 :-  ಪಟ್ಟಣದ ಓಣಿ ಓಣಿಗಳಲ್ಲಿ  ಚಿಣ್ಣರು ಹಾಗೂ ಮಹಿಳೆಯರು ಹೋಳಿ ಹಬ್ಬದ ಸಡಗರದಲ್ಲಿ ತೊಡಗಿ ಬಣ್ಣದೋಕುಳಿಯಲ್ಲಿ ಮಿಂದೆದ್ದರು.
ಕೊರಖಣ, ಜೂಗಲರ ಬಡಾವಣೆ ಸೇರಿದಂತೆ ಇತರೆ ಓಣಿ ಓಣಿಗಳಲ್ಲಿ ಮಕ್ಕಳು ಹಾಗೂ ಮಹಿಳೆಯರು ಬಣ್ಣ ಎರಚಿಕೊಂಡು ಹಬ್ಬದ ಸಡಗರವನ್ನು ಸಂಭ್ರಮಿಸಿದರು. ಶಾಲಾ ಕಾಲೇಜಿಗೆ ಬಂದ ಮಕ್ಕಳು ಮುಗಿಸಿಕೊಂಡು ಗ್ರಾಮಗಳಿಗೆ ತೆರಳಲು ಕೂಡ್ಲಿಗಿ ಬಸ್ ನಿಲ್ದಾಣಕ್ಕೆ ಬಂದು ಬಣ್ಣದ ಪುಡಿಯನ್ನು ಒಬ್ಬರಿಗೊಬ್ಬರು ಎರಚುವ ಮೂಲಕ ಹೋಳಿ ಹಬ್ಬದ ಸಡಗರದಲ್ಲಿ ಮೆರೆದರು.