ಕೂಡ್ಲಿಗಿಯಲ್ಲಿ ಮೊಹರಂ. ನಿಗಿನಿಗಿ ಕೆಂಡ ತುಳಿದ ಭಕ್ತಸಮೂಹ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 30 :- ತಾಲೂಕಿನ ಹಾಗೂ ಗ್ರಾಮೀಣ ಭಾಗದ ಸುತ್ತಮುತ್ತಲಿನಲ್ಲಿ ಆಚರಿಸುವ ಮೊಹರಂ ಹಬ್ಬವು ಶನಿವಾರವೇ (ನಿನ್ನೆಗೆ )ಕೊನೆಯ ದಿನವಾದರೆ ಕೂಡ್ಲಿಗಿ ಪಟ್ಟಣದ ಅನೇಕ ಪರಿಶಿಷ್ಟ ಪಂಗಡದ ಸಮುದಾಯದ ಜನರೇ ಹೆಚ್ಚಾಗಿ ಈ ಹಬ್ಬದ ಆಚರಣೆ ಮಾಡುವುದರಿಂದ ಶನಿವಾರದ ಬದಲಾಗಿ ಇಂದು ಮೊಹರಂ ಕೊನೆದಿನವಾಗಿ ಆಚರಿಸುತ್ತಿದ್ದಾರೆ.
ಶನಿವಾರ ಸಂಜೆಯಿಂದಲೂ ಪಟ್ಟಣದ ಪೀರಲ ಸ್ವಾಮಿ ಕೂಡುವ ಸ್ಥಳದಲ್ಲಿ ಸಾವಿರರೂ ಭಕ್ತರು ಸೇರಿ ಮಾಬು ಸುಭಾನಿ, ಬೀಬಿ ಫಾತಿಮಾ ಸೇರಿ ಇನ್ನು ಕೆಲವು ದೇವರುಗಳಿಗೆ ಸಕ್ಕರೆ ಹೋದಿಕೆ ಮಾಡಿಸಿ ಮಕ್ಕಳು ಹಿರಿಯರು ಎನ್ನದೆ ದೇವರ ಸನ್ನಿದಿಯ ನವಿಲುಗರಿಯಿಂದ ತಲೆಗೆ ಹಾಗೂ ಬೆನ್ನಿಗೆ ತಟ್ಟಿ ಭಕ್ತಿಯ ಪುಳಕ ಮೂಡಿಸುವುದು ಕೆಲವರು ಒಳ್ಳೆಯದಾದರೆ ನಿನಗೆ ಬೆಲ್ಲ ಹಾಗೂ ಮಂಡಕ್ಕಿಯ ಹರಕೆ ತೀರಿಸುವ ಬಗೆಯನ್ನು ಭಕ್ತರು ಆರ್ಪಿಸಿದರು ಅಲ್ಲದೆ ಪೀರಲ ದೇವಸ್ಥಾನದ ಮುಂದಿನ ಅಲೇಗುಣಿಯಲ್ಲಿ ಬೆಂಕಿ ಹಾಕಿ ಜನರ ಮನಸ್ಸಿನ ಕೋರಿಕೆ ಹರಕೆಯ ಪ್ರತೀಕವಾಗಿ ಬೆಂಕಿ ಕೆಂಡದಲ್ಲಿ ಉಪ್ಪು ಹಾಕುವ ಭಕ್ತರ ಸಾಲು ದೃಶ್ಯ ಕಣ್ಮನ ಸೆಳೆಯುತ್ತದೆ ಮನೆಗೊಬ್ಬರು ಕಟ್ಟಿಗೆ ತುಂಡು ತಂದು ಹಾಕಿ ನಿಗಿ ನಿಗಿ ಕೆಂಡವಾಗುವ ತನಕ ಅಂದರೆ ಇಂದು ನಸುಕಿನ ಜಾವದವರೆಗೆ ದೇವಸ್ಥಾನದ ಮುಂದೆ ಸವಾಲಿನ ಪದಗಳು ಕೇಳಲು ರಾತ್ರಿ ಪೂರಾ ಭಕ್ತರು ಜಾಗರಣೆ ಮಾಡುತ್ತಾರೆ ಅಲ್ಲದೆ ನಸುಕಿನ ಜಾವ  ಮುಸ್ಲಿಂ ಅರ್ಚಕರು ಪೀರಲ ದೇವರುಗಳನ್ನು ಹೊತ್ತು ಓಣಿಗಳಲ್ಲಿ ಸಾಗುವಾಗ ಈಡೀ ಭಕ್ತಸಮುದಾಯ ದೇವರಿಗೆ ಕೈಮುಗಿದು ತಮ್ಮ ಹರಕೆಯ  ಬೇಡಿಕೆ ಇಡುತ್ತಾರೆ ಮತ್ತು ನಸುಕಿನ ಜಾವ ದೇವಸ್ಥಾನದ ಮುಂದಿನ ಕೆಂಡದ ಮುಂದೆ ಕೆಲಭಕ್ತರು ತಮ್ಮ ಬೇಡಿಕೆ ಕೇಳಿದಾಗ ದೇವರ ಮೌಖಿಕ ಸಂದೇಶ ನೀಡುವ ಭಕ್ತರ ಹಾಗೂ ದೇವರ ನಡುವಿನ ಮೂಕ ಸಂಭಾಷಣೆ ಕೆಲವರಿಗಷ್ಟೇ ತಿಳಿಯಬಲ್ಲದು.ನಂತರ ನಿಗಿ ನಿಗಿ ಕೆಂಡದಲ್ಲಿ ದೇವರು ಹೊತ್ತವರು ಬೆಂಕಿಯಲ್ಲಿ ನಡೆದು ಸಾಗಿದರೆ ಅದರ ಹಿಂದೆಯೇ ಭಕ್ತರು ಸಹ ಕೆಂಡದಲ್ಲಿ ನಡೆದುಕೊಂಡು ಹೋಗುತ್ತಾರೆ.
ಇಂದು ಸಂಜೆ ಹೊಸಪೇಟೆ ರಸ್ತೆ ಬಳಿಯ ಪೀರಲ ಸ್ವಾಮಿ ದೇವಸ್ಥಾನದಿಂದ ಅಪಾರ ಭಕ್ತರ ಸಮೂಹದಲ್ಲಿ ಎಲ್ಲಾ ದೇವರುಗಳ ಮುಂದೆ ಹೋಗಿ ಬಂದು ನಂತರ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಹರಕೆ ಹೊತ್ತವರು ಕಳ್ಳಳ್ಳಿ ಬುವಾ, ಹುಲಿ ವೇಷ ಧರಿಸಿ ಹರಕೆ ತೀರಿಸುವ ಭಕ್ತರ ಗುಂಪಿನಲ್ಲಿ ಮೆರವಣಿಗೆ ಸಾಗಿ ಕೊಟ್ಟೂರು ರಸ್ತೆಯ ಸಮೀಪದ ದರ್ಗಾದ ಹತ್ತಿರ ದೇವರನ್ನು ನೀರಲ್ಲಿ ಹಾಕುವ ವಿಸರ್ಜನಾ ಸಾಂಪ್ರದಾಯಿಕ ಕಾರ್ಯಕ್ರಮದಿಂದ ಮೊಹರಂ ಹಬ್ಬಕ್ಕೆ ಕೊನೆಯಾಡಲಾಗುತ್ತದೆ.

One attachment • Scanned by Gmail