ಕೂಡ್ಲಿಗಿಯಲ್ಲಿ ಬಿಜೆಪಿ ಪರ ನಟ ಸುದೀಪ್ ರೋಡ್ ಶೋ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.27 :- ಪಟ್ಟಣದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಮೂಲಕ ತೆರೆದ ವಾಹನದಲ್ಲಿ ನಟ ಸುದೀಪ್ ಕೂಡ್ಲಿಗಿ ಬಿಜೆಪಿ ಅಭ್ಯರ್ಥಿ ಲೋಕೇಶ ವಿ ನಾಯಕ ಪರ ಮತ ಪ್ರಚಾರದ ರೋಡ್ ಶೋ ನಡೆಸಿದರು ಹಾಗೂ ಮದಕರಿ ವೃತ್ತ ತಲುಪಿ ಅಲ್ಲಿನ ವೃತ್ತಕ್ಕೆ ಪುಷ್ಪಮಾಲೆ ಅರ್ಪಿಸಿದರು ಈ ಸಂದರ್ಭದಲ್ಲಿ ಕೂಡ್ಲಿಗಿ ಬಿಜೆಪಿ ಅಭ್ಯರ್ಥಿ ಲೋಕೇಶ ವಿ ನಾಯಕ ಹಾಗೂ ಬಿಜೆಪಿ ಮುಖಂಡರು ಜೊತೆಗಿದ್ದರು. ಬಹಿರಂಗ ಸಭೆಗೆ ಪರವಾನಿಗೆ ಇಲ್ಲದೆ ಇದ್ದುದರಿಂದ ತಮ್ಮ ವಾಹನದಲ್ಲಿ ಕೊಟ್ಟೂರು ರಸ್ತೆಕಡೆ ಸಾಗಿದರು. ಅಪಾರ ಅಭಿಮಾನಿ ಬಳಗ ನಟ ಸುದೀಪ್ ನೋಡಲು ಮುಗಿಬಿದ್ದಿದ್ದರು.