ಕೂಡ್ಲಿಗಿಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಅದ್ದೂರಿ ಮೆರವಣಿಗೆ.  

ಕೂಡ್ಲಿಗಿ. ಏ. 17 :- ಕಾಂಗ್ರೆಸ್ ಅಭ್ಯರ್ಥಿ ಡಾ ಎನ್ ಟಿ ಶ್ರೀನಿವಾಸ ಇಂದು ಕೂಡ್ಲಿಗಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದು ನಂತರ ಕೂಡ್ಲಿಗಿ ಕೊತ್ತಲಾಂಜನೇಯ ದೇವಸ್ಥಾನದಿಂದ ಅಂಬೇಡ್ಕರ್ ವೃತ್ತದವರೆಗೆ ಜೀಪೊಂದರಲ್ಲಿ ಸಾವಿರರೂ ಮಂದಿ ಅಪಾರ ಬೆಂಬಲಿಗರು ಮೆರವಣಿಗೆ ನಡೆಸಿದರು.

ಈ ಮೆರವಣಿಗೆಯಲ್ಲಿ ಟಿಕೆಟ್ ವಂಚಿತರಾಗಿ ಭಿನ್ನಮತ ತೋರಿದ್ದ ನರಸಿಂಹಗಿರಿ ವೆಂಕಟೇಶ, ಗುರುರಾಜನಾಯಕ ಶಮನಗೊಳಿಸಿಕೊಂಡು ಕಾಂಗ್ರೇಸ್ ಅಭ್ಯರ್ಥಿ ಪರ ನಿಂತು ಮೆರವಣಿಗೆಯಲ್ಲಿದ್ದರು. ಇವರ ಜೊತೆಗೆ ರಘು ಗುಜ್ಜಲ್, ಕಾನಾಮಡುಗು ಶಶಿಧರ ಹಾಗೂ ಇತರೆ ಮುಖಂಡರು ಇದ್ದರು. ಜೀಪೊಂದರಲ್ಲಿ ವಾಸವಿ ಕಲ್ಯಾಣ ಮಂಟಪದಿಂದ ಸಾಗಿ ಮದಕರಿ ವೃತ್ತ ಹಾಗೂ ಅಂಬೇಡ್ಕರ್ ವೃತಕ್ಕೆ ಪುಷ್ಪಮಾಲೆಯನ್ನು ಡಾ ಶ್ರೀನಿವಾಸ ಅರ್ಪಿಸಿದರು. ಮೆರವಣಿಗೆಯನ್ನು ಅಂಬೇಡ್ಕರ್ ವೃತ್ತಕ್ಕೆ ಅಂತ್ಯಗೊಳಿಸಿ ಪೋಲೀಸರ ಆದೇಶದಂತೆ ಜನರ ನಡುವೆ ಕಾಲ್ನಡಿಗೆಯಲ್ಲಿ ಕಾಂಗ್ರೇಸ್ ಕಚೇರಿಯತ್ತ ಸಾಗಿದರು.