ಕೂಡ್ಲಿಗಿಯಲ್ಲಿ ಕಲ್ಯಾಣಕರ್ನಾಟಕ ಉತ್ಸವ ದಿನ ತಾ. ಪಂ. ಅಧ್ಯಕ್ಷರಿಂದ ಧ್ವಜಾರೋಹಣ

ಕೂಡ್ಲಿಗಿ.ಸೆ.17:- ಇಂದು ರಾಜ್ಯದ ಆರು ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ನಡೆಯಲಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು ಪಂಚಾಯತಿ ಮುಂದೆ ತಾಲೂಕು ಪಂಚಾಯತಿ ಅಧ್ಯಕ್ಷೆ ಕಲ್ಯಾಣಕರ್ನಾಟಕ ಉತ್ಸವದ ಧ್ವಜಾರೋಹಣ ನೆರವೇರಿಸಿದರು.
ಈ ಸಂಧರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸಣ್ಣ ಮಾತನಾಡಿ ಕಲ್ಯಾಣಕರ್ನಾಟಕದಡಿ ರಾಜ್ಯದ ಆರು ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಕೊಪ್ಪಳ, ಬೀದರ್, ರಾಯಚೂರು ಮತ್ತು ಬಳ್ಳಾರಿ ಇದ್ದು ಇವುಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು ನಮ್ಮ ತಾಲೂಕು ಸಹ ಈ ಕಲ್ಯಾಣಕರ್ನಾಟಕದ ವ್ಯಾಪ್ತಿಗೆ ಬರಲಿದ್ದು ಹಿಂದುಳಿದ ತಾಲೂಕಿನ ಅಭಿವೃದ್ಧಿಗೆ ಕ್ಷೇತ್ರದ ಶಾಸಕರು ಹಾಗೂ ಜನಪ್ರತಿನಿಧಿಗಳು ಸೇರಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಅವರ ಜೊತೆಗೆ ತಾಲೂಕು ಆಡಳಿತ ಸಹ ಅಭಿವೃದ್ಧಿಗೆ ಮುಂದಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಕಾವಲ್ಲಿ ಶಿವಪ್ಪನಾಯಕ, ಮಾಜಿ ಸದಸ್ಯ ಎಸ್. ದುರುಗೇಶ್ ಮತ್ತು ತಾಲೂಕು ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.