ಕೂಡ್ಲಿಗಿಯಲ್ಲಿ ಇಂದು ಬೂಸ್ಟರ್ ಡೋಸ್ ಗೆ ಚಾಲನೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು. 16 :- ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಬೂಸ್ಟರ್ ಡೋಸ್ ನೀಡುವುದಕ್ಕೆ ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ಮುಖಂಡರು ಕಾರ್ಯಕ್ರಮಕ್ಕೆ ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ. ಪ್ರದೀಪ ಮಾತನಾಡಿ ಈಗಾಗಲೇ ಕೋವಿಡ್ ನಿಯಂತ್ರಣಕ್ಕೆ ರಾಮಬಾಣವಾಗಿರುವ ಕೋವಿಶಿಲ್ಡ್ ಹಾಗೂ ಕೊವ್ಯಾಕ್ಸಿನ್ ಎರಡು ಡೋಸ್ ಪಡೆದುಕೊಂಡವರು ಆರು ತಿಂಗಳಾಗಿದ್ದರೆ ಬೂಸ್ಟರ್ ಡೋಸ್ ಪಡೆದುಕೊಳ್ಳುವ ಮೂಲಕ ಮಹಾಮಾರಿ ಕೋವಿಡ್ ಬರದಂತೆ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸರ್ಕಾರ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಸಾಕಷ್ಟು ಶ್ರಮಿಸುತ್ತಿದ್ದು ತಪ್ಪದೆ ಎಲ್ಲರೂ ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಭೀಮೇಶ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಸ್ ದುರುಗೇಶ, ಪಟ್ಟಣ ಪಂಚಾಯತಿ ಸದಸ್ಯರಾದ ಸಚಿನಕುಮಾರ, ಕ ಸಾ ಪ ಅಧ್ಯಕ್ಷ ಅಂಗಡಿ ವೀರೇಶ ಮತ್ತು ಕೊಟ್ಟೂರು ತಾಲೂಕು ಸರ್ಕಾರಿ ನೌಕರರ ಸಂಘದ  ಅಧ್ಯಕ್ಷ ಜಗದೀಶ ಉಪಸ್ಥಿತರಿದ್ದರು. ಪ್ರಶಾಂತ ಸ್ವಾಗತಿಸಿ ನಿರೂಪಿಸಿದರು. ಕಾಲೇಜ್ ವಿದ್ಯಾರ್ಥಿಗಳಿಗೆ ಬೂಸ್ಟರ್ ಡೋಸ್ ನೀಡುವ ಮೂಲಕ ಚಾಲನೆ ನೀಡಲಾಯಿತು. ಸುನೀತಾ ಹೆಚ್ ಐ ಓ, ಪಿ ಹೆಚ್ ಸಿ ಓ ಗಿರಿಜಾ, ಇತರರು ಉಪಸ್ಥಿತರಿದ್ದರು.