ಕೂಡ್ಲಿಗಿಯಲ್ಲಿಂದು ನೂತನ ಶಾಸಕ ಡಾ ಶ್ರೀನಿವಾಸ ಅಧಿಕಾರಿಗಳ ಮೊದಲ ಸಭೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.26 :- ಕೂಡ್ಲಿಗಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ನಂತರ ಇಂದು ಮಧ್ಯಾಹ್ನ 3ಗಂಟೆಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಮೊದಲ ಸಭೆಯನ್ನು ಕರೆದಿದ್ದಾರೆ.
ಸಭೆಯನ್ನು ಕೂಡ್ಲಿಗಿ ತಾಲೂಕು ಪಂಚಾಯತಿ ಅಧಿಕಾರಿಗಳು ಆಯೋಜಿಸಿದ್ದು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಿ ಸಭೆಯಲ್ಲಿ ಆಯಾ ಇಲಾಖೆಯ ಅಧಿಕಾರಿಗಳ ಪರಿಚಯದ ಜೊತೆಗೆ ಆಯಾ ಇಲಾಖೆಯ ಪ್ರಗತಿ ವರದಿಯನ್ನು ಸಲ್ಲಿಸುವುದು ಕಾರ್ಯಗಳ ವಿವರಣೆಯನ್ನು ಸಲ್ಲಿಸುವಂತೆ ಶಾಸಕರು ತಿಳಿಸಿದ್ದಾರೆಂದು ತಿಳಿದಿದೆ.
ಹಾರ ತುರಾಯಿ ಬೇಡ : ಸಾರ್ವಜನಿಕ ಸಮಾರಂಭ ಸೇರಿದಂತೆ ಸಾರ್ವಜನಿಕರು  ಸನ್ಮಾನ ಮಾಡಲು ಹಾರ ತುರಾಯಿ  ತರಬೇಡಿ ನಿಮಗಿರುವ ಹಾಗೂ  ಕ್ಷೇತ್ರದ ಸಮಸ್ಯೆ ಹೊತ್ತು  ತನ್ನಿ ಆ ಸಮಸ್ಯೆ ಪರಿಹಾರದ ಇತ್ಯರ್ಥ ಮಾಡಿಕೊಡುವ ಕ್ಷೇತ್ರದ ಸೇವಕನಂತೆ ದುಡಿಯುವೆ ಎನ್ನುವ ಸರಳ ವ್ಯಕ್ತಿತ್ವದ ಶಾಸಕರ ನುಡಿಯನ್ನು ಡಾ ಶ್ರೀನಿವಾಸ ನುಡಿಡಿದ್ದಾರೆ.