ಕೂಡ್ಲಿಗಿಯಲ್ಲಿಂದು ಡಾ.ಕಲ್ಲಯ್ಯಜ್ಜರಿಗೆ ಪಾದಪೂಜೆ ಹಾಗೂ ತುಲಾಭಾರ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು. 18 :- ಪಟ್ಟಣದ ರಂಗಭೂಮಿ ಕಲಾವಿದೆ ದಿವ್ಯಕುಮಾರಿ ಮೊಗಲಹಳ್ಳಿ ನಾಗರಾಜ  ಎಂಬುವರ ಮನೆಯಲ್ಲಿ ಇಂದು ಮಧ್ಯಾಹ್ನ  ಗದಗದ ವೀರೇಶ್ವರ ಪುಣ್ಯಾಶ್ರಮ ಮಠದ ಪರಮಪೂಜ್ಯ ಡಾ.ಕಲ್ಲಯ್ಯಜ್ಜನವರಿಗೆ ಪಾದ ಪೂಜೆ ಹಾಗೂ ಪ್ರಸಾದ ವ್ಯವಸ್ಥೆ ಕಲ್ಪಿಸಿ ಮೇನ್ ಬಾಯ್ಸ್ ಸ್ಕೂಲ್ ಆವರಣದಲ್ಲಿ ಕಲಾವಿದರ ಸಮ್ಮುಖದಲ್ಲಿ ದಿವ್ಯಕುಮಾರಿ ಅವರಿಂದ ಪೂಜ್ಯರಿಗೆ ತುಲಾಭಾರ ಕಾರ್ಯ ನಡೆಸಲಾಯಿತು.
ಇಂದು ಪಟ್ಟಣದ ಮೇನ್ ಬಾಯ್ಸ್ ಶಾಲೆಯ ಆವರಣದಲ್ಲಿ ಕಲಾವಿದರ ಬಳಗದಿಂದ ಆಯೋಜಿಸಿದ್ದ  ಕಲೋತ್ಸವ ಕಾರ್ಯಕ್ರಮದಲ್ಲಿ ದಿವ್ಯಸಾನಿದ್ಯ ವಹಿಸಲು ಹಾಗೂ ಪರಮಪೂಜ್ಯರಿಗೆ ದಿವ್ಯಕುಮಾರಿಯವರಿಂದ ತುಲಾಭಾರ ವ್ಯವಸ್ಥೆಗೆ ಆಗಮಿಸುತ್ತಿರುವ ಪರಮಪೂಜ್ಯರು ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಒಂಭತ್ತನೇ ವಾರ್ಡಿನಲ್ಲಿರುವ ರಂಗಕಲಾವಿದೆ ದಿವ್ಯಕುಮಾರಿ ಮತ್ತು ನಾಟಕ ರಚನೆಕಾರ ಮೊಗಲಹಳ್ಳಿ ನಾಗರಾಜ ಅವರ ಮನೆಯಲ್ಲಿ ಪರಮಪೂಜ್ಯರ ಆಗಮನಕ್ಕೆ ಹೂವಿನ ಹಾಸಿಗೆಯನ್ನು ಹಾಸಲಾಗಿತ್ತು ಆದರಲ್ಲಿ ನಡೆದುಬಂದ ಪರಮ ಪೂಜ್ಯರು ಕುಟುಂಬ ಸಮೇತರಿಂದ ಪಾದಪೂಜೆಯಾದ ನಂತರ ಪ್ರಸಾದ ಪಡೆದುಕೊಂಡು ಪೂಜೆ ನೆರವೇರಿಸಿದ ದಿವ್ಯಕುಮಾರಿ ನಾಗರಾಜ ಕುಟುಂಬಕ್ಕೆ ಹಾಗೂ ಈ ಸಂದರ್ಭದಲ್ಲಿ ಭಾಗವಹಿಸಿದ ಕಲಾವಿದರಾದ ಉಜ್ಜಿನಿ ನಾಗರಾಜ, ಬಿ ಜಿ ಕೆರೆ ಆರ್ಕೆಸ್ಟ್ರಾ ಮಾಲೀಕ ಉಪ್ಪಿ ಹಾಗೂ ಇತರರಿಗೆ ಆಶೀರ್ವದಿಸಿದರು. 
ಪೂಜ್ಯರು  ಪಾದಪೂಜೆ  ಮುಗಿಸಿಕೊಂಡು ನಂತರ ಪಟ್ಟಣದ ಶಾಲಾವರಣದಲ್ಲಿ ಆಯೋಜಿಸಿದ್ದ ತುಲಾಭಾರ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನೆರೆದ ಎಲ್ಲಾ ಕಲಾವಿದರನ್ನು  ಆಶೀರ್ವದಿಸಿದರು.