ಕೂಡ್ಲಿಗಿಗೆ ಸಚಿವ ಶ್ರೀ ರಾಮುಲು ಭೇಟಿ

ಕೂಡ್ಲಿಗಿ. ನ. 14:- ಇಂದು ಬೆಳಿಗ್ಗೆ ಪಟ್ಟಣದ ಬಿಜೆಪಿ ರಾಜ್ಯ ಸದಸ್ಯ ಕೆ ಎಂ ತಿಪ್ಪೇಸ್ವಾಮಿ ಮನೆಗೆ ಉಜ್ಜಿನಿಗೆ ಹೋಗುವ ಮಾರ್ಗ ಮದ್ಯದ ಸಂದರ್ಭದಲ್ಲಿ ಭೇಟಿ ನೀಡಿ ಉಪಹಾರ ಸೇವಿಸಿ ಬಿಜೆಪಿ ಮುಖಂಡರು, ಪಟ್ಟಣ ಪಂಚಾಯತಿ ಬಿಜೆಪಿ ಅಧ್ಯಕ್ಷರು ಉಪಾಧ್ಯಕ್ಷರು ಬಿಜೆಪಿ ಸದಸ್ಯರು, ಬಿಜೆಪಿ ಯುವ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮಾತನಾಡಿ ಎಲ್ಲರಿಗೂ ದೀಪಾವಳಿ ಶುಭಾಶಯ ತಿಳಿಸಿ ಮಹಾಮಾರಿ ಕೊರೋನಾ ತೊಲಗಿ ಎಲ್ಲರಲ್ಲಿ ಉತ್ತಮ ಆರೋಗ್ಯ ಕಾಪಾಡಲಿ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಎಲ್ಲರಿಗೂ ಶುಭಹಾರೈಸಿದರು.