ಕೂಡ್ಲಿಗಿಗೆ ವಿಜಯನಗರ ಡಿಸಿ ಭೇಟಿ, ಸ್ಟ್ರಾಂಗ್ ರೂಂ ವೀಕ್ಷಣೆ.

ಕೂಡ್ಲಿಗಿ. ಏ. 15 :- ಪಟ್ಟಣದ ತಾಲೂಕು ಆಡಳಿತ ಸೌಧಕ್ಕೆ ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ ಇಂದು ಮಧ್ಯಾಹ್ನ ಧಿಡೀರ್ ಭೇಟಿ ನೀಡಿ ಚುನಾವಣಾ ತಯಾರಿ ಮಾಹಿತಿ ಕಲೆಹಾಕಿಕೊಂಡು ಸ್ಟ್ರಾಂಗ್ ರೂಂ, ಕಂಟ್ರೋಲ್ ರೂಂ ಹಾಗೂ ಚುನಾವಣಾ ಶಾಖೆಗೆ ಭೇಟಿ ನೀಡಿ ಪರಿಶೀಲಿಸಿದರು.

ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದ ವಿಜಯನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೆಂಕಟೇಶ ಕೂಡ್ಲಿಗಿ ತಾಲೂಕು ಆಡಳಿತ ಸೌಧದ ಚುನಾವಣಾಧಿಕಾರಿ ಕೊಠಡಿ, ಚುನಾವಣಾ ಶಾಖೆಗೆ ಭೇಟಿ ನೀಡಿ ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆಗಳ ವಿವರ ಅಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆ ಹಾಗೂ ಪೋಸ್ಟಲ್ ಬ್ಯಾಲೆಟ್ ಗಳ ಮಾಹಿತಿ ಪಡೆದುಕೊಂಡು ಕಂಟ್ರೋಲ್ ರೂಂ ಪರಿಶೀಲನೆ ಮಾಡಿ ಸರ್ಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿರುವ ಸ್ಟ್ರಾಂಗ್ ರೂಂ ಗೆ ಭೇಟಿ ನೀಡಿ ವೀಕ್ಷಿಸಿದರು. ನಂತರ ಖಾನಹೊಸಹಳ್ಳಿ ಚೆಕ್ ಪೋಸ್ಟ್ ನತ್ತಾ ಪ್ರಯಾಣ ಬೆಳೆಸಿದರು.

ಈ ಸಂದರ್ಭದಲ್ಲಿ ಕೂಡ್ಲಿಗಿ ವಿಧಾನಸಭಾ ಚುನಾವಣಾಧಿಕಾರಿ ಈರಣ್ಣ ಬಿರಾದಾರ್, ಸಹಾಯಕ ಚುನಾವಣಾಧಿಕಾರಿ ಹಾಗೂ ಕೂಡ್ಲಿಗಿ ತಹಸೀಲ್ದಾರ್ ಟಿ. ಜಗದೀಶ, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವೈ ರವಿಕುಮಾರ, ಚುನಾವಣಾ ಸಹಾಯಕ ಸಿಬ್ಬಂದಿಗಳಾದ ಈಶಪ್ಪ, ಶಿವುಕುಮಾರ ಹಾಗೂ ಇತರರು ಹಾಜರಿದ್ದರು.