ಕೂಡ್ಲಿಗಿಃ ಕಾವ್ಯ ಪ್ರಕಾಶನ ನಡೆಸಿದ ಕ್ವಿಜ್ ನಲ್ಲಿ ಡಿ.ಎ.ಸಂದೀಪ್ ಪ್ರಥಮ,


 ಎ.ಹನುಮಂತ ದ್ವಿತೀಯ,  ಕೆ.ಪವನ್ ತೃತೀಯ ಸ್ಥಾನ.
ಸಂಜೆವಾಣಿ ವಾರ್ತೆ.
ಕೂಡ್ಲಿಗಿ. ಜ. 1 :-  ಗಜಾಪುರದ  ಕಾವ್ಯಪ್ರಕಾಶನದಿಂದ ಡಿ.27ರಂದು ಕೊಟ್ಟೂರಿನ ದಿವಂಗತ ಕಡ್ಲಿ ವೀರಣ್ಣ ಸ್ಮರಣಾರ್ಥ ಇಂದು ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ  ನಡೆಸಿದ ಕ್ವಿಜ್ ಪರೀಕ್ಷೆಯಲ್ಲಿ ಕೂಡ್ಲಿಗಿ ಎಸ್.ಎ.ವಿ.ಟಿ.ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿ ಎಂ.ಬಿ.ಅಯ್ಯನಹಳ್ಳಿ ಗ್ರಾಮದ ಡಿ.ಎ.ಸಂದೀಪ್ ಪ್ರಥಮ ಸ್ಥಾನ ಗಳಿಸಿದ್ದು ದ್ವಿತೀಯ ಸ್ಥಾನವನ್ನು ಕೊಟ್ಟೂರಿನ ಇಂದು ಪದವಿ ಕಾಲೇಜಿನ ವಿದ್ಯಾರ್ಥಿ ಶಿವಪುರ ಗ್ರಾಮದ  ಎ.ಹನುಮಂತ, ತೃತೀಯ ಸ್ಥಾನವನ್ನು ಇಂದು ಕಾಲೇಜಿನ ವಿದ್ಯಾರ್ಥಿ ಗಜಾಪುರದ  ಕೆ.ಪವನ್ ಅವರು ಪಡೆದಿರುತ್ತಾರೆ ಎಂದು ಕಾವ್ಯಪ್ರಕಾಶನದ ಪ್ರಕಾಶಕ ಭೀಮಣ್ಣ ಗಜಾಪುರ ತಿಳಿಸಿದ್ದಾರೆ.
 ಅವರು ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು ಜನವರಿ ತಿಂಗಳ ಕೊನೆಯ ವಾರದಲ್ಲಿ ನಡೆಯುವ ಕಾವ್ಯ ಪ್ರಕಾಶನ  ಆಯೋಜಿಸುವ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ 1೦ ಸಾವಿರ, ದ್ವಿತೀಯ ಬಹುಮಾನ 5 ಸಾವಿರ, ತೃತೀಯ ಬಹುಮಾನ 25೦೦ಬಹುಮಾನ ಹಾಗೂ ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವುದು  ಎಂದು ತಿಳಿಸಿದ್ದಾರೆ.
ಕ್ವಿಜ್ ನಲ್ಲಿ ಟಾಪ್ ಟೆನ್ ನಲ್ಲಿ  ಬಂದ ವಿದ್ಯಾರ್ಥಿಗಳನ್ನು ಸಹ ಗುರುತಿಸಲಾಗಿದ್ದು ಅದರಲ್ಲಿ ಕೊಟ್ಟೂರಿನ ಇಂದು ಪದವಿ ಕಾಲೇಜಿನ ಕೆ.ಮನು, ಎ.ಎಂ.ಪ್ರಿಯಾಂಕ, ಕೂಡ್ಲಿಗಿ ಎಸ್.ಎ.ವಿ.ಟಿ. ಸರ್ಕಾರಿ ಪದವಿ ಕಾಲೇಜಿನ ಜಿ.ಮಂಜುನಾಥ, ಕೊಟ್ಟೂರಿನ ಇಂದು ಪದವಿ ಕಾಲೇಜಿನ ಬಿ.ರಾಜೇಶ್, ಟಿ.ವೆಂಕಟೇಶ್, ಸುರೇಶ್ ಕೋಡಿಹಳ್ಳಿ, ಅಕ್ಕಸಾಲಿ ಪ್ರಸನ್ನ ಇವರಿಗೂ ಸಹ ಪ್ರಶಸ್ತಿಪತ್ರ  ನೀಡಲಾಗುವುದು ಎಂದು ಭೀಮಣ್ಣ ಗಜಾಪುರ ತಿಳಿಸಿದ್ದಾರೆ.