ಕೂಡು ಕುಟುಂಬತ ತೃಪ್ತಿ ಮಹಿಳೆಯ ಜೀವನದ ಸಾರ್ಥಕತೆ

ದಾವಣಗೆರೆ-ಮಾ.31; ವಾಸ್ತವವಾಗಿ ಹಣದ ಅಮೀಷಕ್ಕೆ ಒಳಗಾಗಿ, ಉನ್ನತ ಹುದ್ದೆಗಳ ನಿರೀಕ್ಷೆ, ಹೊರ ದೇಶಗಳಿಗೆ ಹೋಗುವ ಭರಾಟೆಯಲ್ಲಿ ಕೂಡು ಕುಟುಂಬದ ಸಂಸ್ಕಾರ, ಸಂಸ್ಕೃತಿ ಮಾನವೀಯ ಮೌಲ್ಯಗಳ ಸಂಬAಧಗಳು ಮರೆಯಾಗುತ್ತಿರುವುದು ವಿಷಾದದ ಸಂಗತಿ. ಈ ಆಧುನಿಕ ತಂತ್ರಜ್ಞಾನದ ಅನುಕರಣೆಯಿಂದ ನಮ್ಮ ಕುಟುಂಬಗಳ ಮುಂದಿನ ಪೀಳಿಗೆಗಳಿಗೆ ಮಾರಕವಾಗುತ್ತದೆ. ಸಾಮಾಜಿಕ ಕಾಳಜಿಯ ಸಮಾಜ ಸೇವೆಯೊಂದಿಗೆ ಕೂಡು ಕುಟುಂಬದ ತೃಪ್ತಿ ಮಹಿಳೆಯರ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದು ನಗರದ ಸ್ತ್ರೀ ರೋಗ ತಜ್ಞರೂ ಹಿರಿಯ ಪರಿಸರ ವಾದಿ ಡಾ.ಶಾಂತಾ ಭಟ್ ತಮ್ಮ ಅಂತರಾಳದ ಭಾವನೆಗಳನ್ನು ವ್ಯಕ್ತಪಡಿಸಿದರು.ದಾವಣಗೆರೆಯ ಕಲಾಕುಂಚ ಮಹಿಳಾ ವಿಭಾಗದ ಆಶ್ರಯದಲ್ಲಿ ನಗರದ ಪ್ರವಾಸಿ ಮಂದಿರದ ರಸ್ತೆಯಲ್ಲಿರುವ ರೋಟರಿ ಬಾಲಭವನದ ಮೊದಲನೇ ಮಹಡಿಯ ಸಭಾಂಗಣದಲ್ಲಿ  ವಿಶ್ವ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ “ದಾವಣಗೆರೆಯ ಗೃಹಿಣಿ ಸ್ಪರ್ಧೆ”ಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸ್ಪರ್ಧೆಗಳ ತೀರ್ಪುಗಾರರಾಗಿ ಅವರು ಮಾತನಾಡಿದರು.ವೇದಿಕೆಯಲ್ಲಿ ಉಪಸ್ಥಿತರಿದ್ದ ಇನ್ನೊಬ್ಬ ಮುಖ್ಯ ಅತಿಥಿಗಳಾದ ಅಂತರಾಷ್ಟಿçÃಯ ಕ್ರೀಡಾಪಟು ‘ಏಕಲವ್ಯ’ ರಾಜ್ಯ ಪ್ರಶಸ್ತಿ ಪುರಸ್ಕೃತರೂ ಶಿವಮೊಗ್ಗ ಪೊಲೀಸ್ ಇಲಾಖೆಯ ಪಿ.ಎಸ್.ಐ. ಶ್ರೀಮತಿ ಕೆ.ಎಸ್.ಶೈಲಜಾರವರು ಮಾತನಾಡಿ ಕಾನೂನುಗಳ ಸಾರಿಗೆ ನಿಯಮಗಳ ಅರಿವನ್ನು ಮಕ್ಕಳಲ್ಲಿ ಮೂಡಿಸಿ ಜಾಗೃತಿಗೊಳಿಸುವ ಜವಾಬ್ದಾರಿ ಪೋಷಕರದ್ದು. ಇತ್ತೀಚಿನ ದಿನಮಾನಗಳಲ್ಲಿ ಕೆಲವು ಪೋಷಕರು ಚಿಕ್ಕ ಚಿಕ್ಕ ಮಕ್ಕಳಿಗೆ ವಾಹನ ಚಲಾಯಿಸುವ ಮೇರೆ ಮೀರಿದ ಭರವಸೆ ಕೆಲವು ಅಪಘಾತಕ್ಕೆ ಪೂರಕವಗುತ್ತದೆ. ಈ ನಿಟ್ಟಿನಲ್ಲಿ ೧೮ ವರ್ಷದ ಒಳಗಿನ ಮಕ್ಕಳಿಗೆ ಚಾಲನೆ ಪರವಾನಿಗೆ ಇಲ್ಲದೆ ವಾಹನ ಚಲಾಯಿಸಿದಾಗ ಅದರ ಶಿಕ್ಷೆ ಪೋಷಕರಿಗೆ ಎಂದು ಕಾನೂನು ಶಿಸ್ತಿನ ಬಗ್ಗೆ ವಿವರಿಸಿದರು.