ತಾಳಿಕೋಟೆ:ಜು.26: 2006 ಮತ್ತು 2009ರಲ್ಲಿ ನಡೆದ ಸಂಗೀತ ಶಿಕ್ಷಕರ ನೇಮಕಾತಿ ನಡೆದಿದ್ದನ್ನು ಹೊರತು ಪಡಿಸಿದರೆ ಇಲ್ಲಿಯವರೆಗೆ ಸಂಗೀತ ಶಿಕ್ಷಕರ ನೇಮಕಾತಿ ನಡೆದಿಲ್ಲಾ ಕೂಡಲೇ ಸಂಗೀತ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ನವಕರ್ನಾಟಕ ಸಂಗೀತ ಪಧವಿದರರ ಸಂಘ ಕಲ್ಬುರ್ಗಿ ತಾಲೂಕಾ ಶಾಖೆ ತಾಳಿಕೋಟೆ ವತಿಯಿಂದ ತಹಶಿಲ್ದಾರರ ಮೂಲಕ ಸರ್ಕಾರಕ್ಕೆ ಮಂಗಳವಾರರಂದು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
2006 ಮತ್ತು 2009 ರ ಹೊರತಾಗಿ ಇಲ್ಲಿಯವರೆಗೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸಂಗೀತ ಶಿಕ್ಷಕರ ನೇಮಕಾತಿ ನಡೆದಿಲ್ಲಾ ಮತ್ತು ಸಮಾಜ ಕಲ್ಯಾಣ ಇಲಾಖೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 246ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಈ ಇಲಾಖೆಯಲ್ಲಿಯೂ ಕೂಡಾ 2011ರ ಹೊರತಾಗಿ ನೇಮಕಾತಿ ಪ್ರಕ್ರೀಯೇ ನಡೆದಿಲ್ಲಾ ಮತ್ತು ಏಕಲವ್ಯ, ಕಿತ್ತೂರ ರಾಣಿ ಚೆನ್ನಮ್ಮ, ಅಟಲಬಿಹಾರಿ ವಾಜಪೇಯಿ, ಅಂಬೇಡ್ಕರ್ ವಸತಿ ಶಾಲೆಗಳಲ್ಲಿಯೂ ಹೊಸದಾಗಿ ಮತ್ತು ಕಳೆದ ನೇಮಕಾತಿಗಳು ಸಹ ಭಾಕಿ ಉಳಿದಿವೆ ಇಷ್ಟಾದರೂ ಸಂಗೀತ ಶಿಕ್ಷಕ ಹುದ್ದೆಗೆ ಅರ್ಹವಿರುವ ಅಭ್ಯರ್ಥಿಗಳು ತಾಳ್ಮೆಯಿಂದ ಶಾಂತಿಯುತವಾಗಿ ಹೋರಾಟ ಮಾಡುತ್ತಾ ಕಾಯುತ್ತಾ ಕುಳಿತ್ತಿದ್ದು ಕೂಡಲೇ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಾರಂಬಿಸಬೇಕೆಂದು ಒತ್ತಾಯಿಸುತ್ತೇವೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಹೊಸ ನೇಮಕಾತಿ ಪ್ರಕ್ರೀಯೇ ಪ್ರಾರಂಬಿಸುವಾಗ ವಯೋಮಿತಿ ಮೀರುತ್ತಿರುವವರಿಗೆ ಮೊದಲ ಆದ್ಯತೆ ನೀಡಬೇಕು, ಶಿಕ್ಷಣ ಇಲಾಖೆಯಲ್ಲಿ ಬರುವ ಕುವೆಂಪು ಶತಮಾನ ಮಾದರಿಯ ಶಾಲೆ, ಆದರ್ಶ ವಿದ್ಯಾಲಯ(ಆರ್.ಎಂ.ಎಸ್.) ಮತ್ತು ಕರ್ನಾಟಕ ಪಬ್ಲಿಕ್(ಆಂಗ್ಲ ಮಾಧ್ಯಮ) ಈ ಎಲ್ಲ ಶಾಲೆಗಳಲ್ಲಿ ಹೊಸದಾಗಿ ಸಂಗೀತ ಶಿಕ್ಷಕರ ಹುದ್ದೆಗಳನ್ನು ಸೇರಿಸಬೇಕು, ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸಂಗೀತ ಶಿಕ್ಷಕರ ನೇಮಕಾತಿಯನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕು ಸಂಗೀತವು ಶಿಕ್ಷಣದ ಅವಿಭಾಜ್ಯ ಅಂಗವಾಗಿರುವದರಿಂದ ಮಕ್ಕಳ ಸರ್ವತೋನ್ಮುಖ ಬೆಳವಣಿಗೆಗೆ ಸಹಾಯಕವಾಗಲಿದೆ ಹೀಗಾಗಿ ಕೂಡಲೇ ಖಾಲಿ ಇರುವ ಹುದ್ದೆಗಳಿಗೆ ಭರ್ತಿಮಾಡಿಕೊಳ್ಳಲು ಸರ್ಕಾರವು ಕ್ರಮ ವಹಿಸಬೇಕೆಂದು ಸರ್ಕಾರಕ್ಕೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಶಿಲ್ದಾರ ಶ್ರೀಮತಿ ಕೀರ್ತಿ ಚಾಲಕ ಅವರಿಗೆ ಸಂಘದ ಪದಾಧಿಕಾರಿಗಳು ಸಲ್ಲಿಸಿದರು.
ಈ ಸಮಯದಲ್ಲಿ ನವಕರ್ನಾಟಕ ಸಂಗೀತ ಪಧವಿದರರ ಸಂಘದ ತಾಳಿಕೋಟೆ ತಾಲೂಕಾ ಘಟಕದ ಕಾರ್ಯದರ್ಶಿ ಮಹೇಶ ಭಂಟನೂರ, ಸಂಗೀತ ಪಧವಿದರರಾದ ದೀಪಕಸಿಂಗ್ ಹಜೇರಿ, ಬಸವರಾಜ ಬಿರಾದಾರ, ಕಾಶಿನಾಥ ಕಾರಗನೂರ, ರಿಯಾಜ್ ಮುಲ್ಲಾ, ಸುರೇಶ ಹೂಗಾರ, ಹಣಮಂತ ಭಜಂತ್ರಿ, ರಾಜು ಗುಬ್ಬೇವಾಡ, ಕುಮಾರ ಕುದರಗುಂಡ, ವಿನೋದ ಚಿಕ್ಕಮಠ, ಅರುಣಕುಮಾರ ಬಡಿಗೇರ, ಗುರುರಾಜ ಬಡಿಗೇರ ಮೊದಲಾದವರು ಇದ್ದರು.