ಕೂಡಗಿ ಹಜರತ್ ಸೈಯದ್ ಶಹಜಾದೆ ಮಸ್ತಾನಶಾ ಖಾದ್ರಿ ಉರುಸು

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.4: ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಕೂಡಗಿ ಗ್ರಾಮದಲ್ಲಿ ಶ್ರೀ ಹಜರತ್ ಸೈಯ್ಯದ ಶಹಜಾದೆ ಮಸ್ತಾನಶಾ ಖಾದ್ರಿ ಅವರ ಉರುಸ ಪ್ರತಿ ವರ್ಷದಂತೆ ಈ ವರ್ಷವೂ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ದೇವರ ಕುದುರೆ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಕುದುರೆ ಮುಂದೆ ಮಲಗಿಕೊಂಡರೆ ದೇವರ ಕುದುರೆ ಅವರನ್ನು ದಾಟುವ ದೃಶ್ಯ ಒಂದು ಪವಾಡವೆ ಎನ್ನುವಂತಿತ್ತು.
ಈ ಜಾತ್ರೆಗೆ ರಾಜ್ಯದ ನಾನಾ ಮೂಲಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಶ್ರೀ ಹಜರತ್ ಸೈಯ್ಯದ ಶಹಜಾದೆ ಮಸ್ತಾನಶಾ ಕಮಿಟಿಯ ಹಿರಿಯರಾದ
ಮೆಹೆರಾಜಪೀರಾ ಜಾಹಾಗೀರದಾರ, ಅಕ್ಬರ್ ವಾಲಿಕಾರ, ಶಫೀಕ ಇನಾಮದಾರ, ಮೋದಿನಸಾಬ್ ಗಡೇದ. ಸಾಹೇಬಗೌಡ ಪಾಟೀಲ, ಎಸ್.ಜಿ. ಗುಡದಿನ್ನಿ, ಮಲ್ಲು ಮಿಣಜಗಿ, ಕಾಸೀಮಸಾಬ ಕೊಡಗಾನೂರ, ಸಲಿಂ ಕರಜಗಿ, ರಾಜೇಸಾಬ ಮುಲ್ಲಾ, ಈರಣ್ಣ ಭೋವಿ, ರಫೀಕ ಇನಾಮದಾರ, ಹಸನಡೊಂಗ್ರಿ ಕೊಲ್ಹಾರ, ಶಾಂತಪ್ಪ ತೂರವಿ,ಸಾಧಿಕ ಗಡೇದ,ರಜಾಕ ಕೊಳ್ಳಿ,ರಾಜೇಸಾಬ ಮುಲ್ಲಾ,ಇನಿತರು ಹಿಂದೂ ಮುಸ್ಲಿಂ ಭಾಂದವರು ಉಪಸ್ಥಿತರಿದ್ದರು.