ಕೂಡಗಿ ಠಾಣೆಯ ಆದೇಶಕ್ಕೆ ಕ್ಯಾರೇ ಎನ್ನದ ಲಾರಿ ಚಾಲಕರು

ಕೊಲ್ಹಾರ: ಫೆ.7:ತಾಲೂಕಿನ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಗೇಟ್ ಹತ್ತಿರ ಲಾರಿ ಚಾಲಕರು ರಸ್ತೆ ಮೇಲೆ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಾರೆ
ಇದರಿಂದ ಕೊಲ್ಹಾರ – ಬ ಬಾಗೇವಾಡಿ ಮಾರ್ಗವಾಗಿ ಹೋಗುವ ಸಾರಿಗೆ ಬಸ್ ಸೇರಿದಂತೆ ಇತರ ವಾಹನ ಸವಾರರಿಗೆ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ಉಂಟಾಗುತ್ತಿದೆ

ಈ ಉಷ್ಣ ವಿದ್ಯುತ್ ಸ್ಥಾವರಿಗೆ ಸಂಬಂದಿಸಿದ ಲಾರಿಗಳಿಗೆ ರಸ್ತೆ ಆಜು ಬಾಜು ವಾಹನಗಳನ್ನು ಪಾಕಿರ್ಂಗ್ ಮಾಡದಂತೆ ನಾಮಫಲಕ ಹಾಕಿದರು ಅದು ಪ್ರಯೋಜನಕ್ಕೆ ಬಾರದೆ ಹೆಸರಿಗೆ ಮಾತ್ರ ಆಗಿದೆ ಅದನ್ನು ಗಾಳಿಗೆ ತೂರಿ ಇಲ್ಲಿ ಎಲ್ಲೆಂದರಲ್ಲಿ ಬುದಿ ತುಂಬಿದ ಲಾರಿಗಳು ದೊಡ್ಡ ಟ್ಯಾಂಕರ್ ಗಳನ್ನು ನಿಲ್ಲಿಸುತ್ತಿದ್ದಾರೆ
ಇದರಿಂದ ಈ ಮಾರ್ಗವಾಗಿ ಹಾದು ಹೋಗುವ ಇತರ ಸಾರ್ವಜನಿಕ ವಾಹನ ಸವಾರರಿಗೆ ತೊಂದರೆ ಉಂಟಾಗುವುದಲ್ಲದೆ ಅಪಘಾತಕ್ಕೆ ಎಡೆಮಾಡಿಕೊಡುವ ರೀತಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರದ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ
ಇದರಿಂದ ಮುಂದೆ ಆಗುವ ಅನಾಹುತಗಳಿಗೆ ಎನ್ ಟಿ ಪಿ ಸಿ ಅಧಿಕಾರಿಗಳೆ ನೇರ ಹೊಣೆ ಹೊರಬೇಕಾಗುತ್ತದೆ ಕೂಡಲೇ ಎನ್ ಟಿ ಪಿ ಸಿ ಅಧಿಕಾರಿಗಳು ಎಚ್ಚೆತ್ತುಕೊಂಡು ಎಲ್ಲಾ ಲಾರಿ ಚಾಲಕರಿಗೆ ರಸ್ತೆಯ ಅಕ್ಕಪಕ್ಕದ ಯಾವುದೇ ಲಾರಿಗಳನ್ನು ನಿಲ್ಲಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ