ಕು. ಶ್ರೀಷ್ಮಾಹೆಗಡೆಗೆ ರಕ್ಷಾ ಮಂತ್ರಿ ಪದಕ ಪ್ರದಾನ

ದಾವಣಗೆರೆ.ಜ.೧೨; ಆದಿತ್ಯ ಬಿರ್ಲಾ ಕಾಲೇಜಿನಿಂದ ಕಳೆದ ಬಾರಿ ಕು.ಶ್ರೀಷ್ಮಾ ಹೆಗಡೆ  ಸೀನಿಯರ್ ಅಂಡರ್ ಆಫೀಸರ್, ಕರ್ನಾಟಕ ಗೋವಾ ರೆಜಿಮೆಂಟಿನ ದಾವಣಗೆರೆಯ 33 ಕರ್ನಾಟಕ ಬೆಟಾಲಿಯನ್ ಯುನಿಟ್ ನಿಂದ ದೇಹಲಿಯಲ್ಲಿ ನಡೆದ ಎನ್ ಸಿ ಸಿ ತಂಡದ ನಾಯಕಿಯಾಗಿ ಗಣರಾಜ್ಯೋತ್ಸವದಲ್ಲಿ ಪಾಲ್ಗೋಂಡ ಹರಿಹರದ  ಕು.ಶ್ರೀಷ್ಮಾ ಹೆಗಡೆ ಈ ಬಾರಿ ನೀಡುವ ಭಾರತದ “ರಕ್ಷಾ ಮಂತ್ರಿ ಪದಕ” ವನ್ನು ಪಡೆಯಲಿದ್ದಾರೆ. ರಕ್ಷಣಾ ಮಂತ್ರಿ   ರಾಜನಾಥ ಸಿಂಗ್ ರವರು ಇದೇ ಜ.21 ರಂದು ಗಣರಾಜ್ಯೋತ್ಸವ ಅಂಗವಾಗಿ ನವದೆಹಲಿಯಲ್ಲಿ ನೀಡಲಿದ್ದಾರೆ ಎಂದು ಸುದ್ದಿ ಗೋಷ್ಠಿಯಲ್ಲಿ ಡಾ. ಜಿ ಜೆ ಮೆಹೆಂದಳೆಯವರು ತಿಳಿಸಿದರು. ದೇಶದ ಬೇರೆ ಬೇರೆ ರಾಜ್ಯಗಳಿಂದ ಇಬ್ಬರು ಎನ್ ಸಿ ಸಿ ಕೆಡೆಟ್ ಹಾಗೂ ನಾಲ್ವರು ಎನ್ ಸಿ ಸಿ ಆಫಿಸರ್ ರವರು  ಈ ಪದಕವನ್ನು ಪಡೆಯುತ್ತಿದ್ದು ಕರ್ನಾಟಕದಿಂದ ಎಸ್.ಯು.ಓ. ಕು. ಶ್ರೀಷ್ಮಾ ಹೆಗಡೆ ಪದಕ ಪಡೆಯಲಿದ್ದಾರೆ ಎಂದರು.ಸುದ್ದಿಗೊಷ್ಠಿಯಲ್ಲಿ ಶಿವಾನಂದ ಹಲಗೇರಿ,ಕೃಷ್ಣಮೂರ್ತಿ ಬೊಂಗಾಳೆ, ಶ್ರೀಮತಿ ನಿವೇದಾ ಕೊಡೇರ್, ಚರಣರಾಜ, ಮಿಥುನ ಕಟವಟೆ, ಧನ್ಯೋಸ್ಮಿ ಭರತಭೂಮಿ ಸದಸ್ಯರು ಉಪಸ್ಥಿತರಿದ್ದರು.