ಕುಸ್ತಿ ಸ್ಪರ್ಧೆ: ಸಾಧನೆ

ಧಾರವಾಡ, ಮಾ.9: ಹಾವೇರಿ ಜಿಲ್ಲೆಯ ಶಿಗ್ಗಾಂವದಲ್ಲಿ ಮಾ.01 ರಿಂದ 06 ರವರೆಗೆ ಜರುಗಿದ ರಾಜ್ಯ ಮಟ್ಟದ 3ನೇ ಕರ್ನಾಟಕ ಕುಸ್ತಿ ಹಬ್ಬದ ಕುಸ್ತಿ ಸ್ಪರ್ಧೆಯಲ್ಲಿ ಧಾರವಾಡ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿರುವ ಕ್ರೀಡಾ ವಸತಿ ಶಾಲೆ, ನಿಲಯಗಳ ಒಟ್ಟು 15 ಕುಸ್ತಿ ಕ್ರೀಡಾಪಟುಗಳು ಭಾಗವಹಿಸಿದ್ದರು.

ಅದರಲ್ಲಿ 04 ಕುಸ್ತಿಪಟುಗಳು ಪ್ರಥಮ ಸ್ಥಾನ ಹಾಗೂ 03 ಕುಸ್ತಿಪಟು ದ್ವಿತೀಯ ಸ್ಥಾನ, 03 ಕುಸ್ತಿಪಟು ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು 10 ಪದಕಗಳನ್ನು ಪಡೆದು ಧಾರವಾಡ ಕ್ರೀಡಾ ವಸತಿ ಶಾಲೆ, ನಿಲಯಗಳಿಗೆ ಕೀರ್ತಿ ತಂದಿದ್ದಾರೆ.

ಸುದೀಪ ನೇಸರಗಿ (41 ಕೆಜಿ) ಪ್ರಥಮ, ಶಿವಾಜಿ ಗಾಯಕವಾಡ (44 ಕೆಜಿ) ಪ್ರಥಮ, ಚೇತನ್ ತುಕ್ಕೋಜಿ (48 ಕೆಜಿ) ಪ್ರಥಮ, ಪ್ರಭಾವತಿ ಲಂಗೋಟೆ (33 ಕೆಜಿ) ಪ್ರಥಮ ಮತ್ತು ಭಜರಂಗಿ ದೊಡ್ಡಮನಿ (35 ಕೆಜಿ) ದ್ವಿತೀಯ, ದಾದಾಪೀರ ಸಲಿಯದನವರ (44 ಕೆಜಿ) ದ್ವಿತೀಯ, ಅನುಶ್ರೀ ಚೌಗಲೆ (54 ಕೆಜಿ) ದ್ವಿತೀಯ ಮತ್ತು ಪುಷ್ಪಾ ನಾಯಕ (42 ಕೆಜಿ) ತೃತೀಯ, ಗಂಗೋತ್ರಿ ಚ್ಹಾವಾಣ (33 ಕೆಜಿ) ತೃತೀಯ, ದರ್ಶನ ತಳವಾರ (22 ಕೆಜಿ) ತೃತೀಯ ಸ್ಥಾನ ಪಡೆದಿದ್ದಾರೆ. 
ಪ್ರಶಸ್ತಿ ವಿಜೇತ ಕ್ರೀಡಾಪಟುಗಳಿಗೆ ಇಲಾಖೆಯ ಹಿರಿಯ ಕುಸ್ತಿ ತರಬೇತುದಾರ ಶಿವಪ್ಪ ಶಿ. ಪಾಟೀಲ ತರಬೇತಿ ನೀಡಿದ್ದಾರೆ. ವಿಜೇತರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ ಎಮ್. ಸರಶೆಟ್ಟಿ, ಧಾರವಾಡ ಜಿಲ್ಲೆಯ ಕುಸ್ತಿಯ ಪದಾಧಿಕಾರಿಗಳಾದ ನಿಂಗರಾಜ ಹಡಪದ ಜೀನಪ್ಪ ಕುಂದಗೋಳ ಅವರು ಅಭಿನಂದಿಸಿದ್ದಾರೆ.