ಕುಸ್ತಿ ವಿಶ್ವದ ಪ್ರಾಚೀನ ಕ್ರೀಡೆ:ಅಪ್ಪಾಸಾಹೇಬ ಪಟ್ಟಣಶೆಟ್ಟಿ

ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.21: ಕುಸ್ತಿ ಪಂದ್ಯಾವಳಿ ವಿಶ್ವದ ಅತ್ಯಂತ ಪ್ರಾಚೀನ ಕ್ರೀಡೆಯಾಗಿದೆ. ಕುಸ್ತಿ ಭಾರತದಲ್ಲಿ ವೈಭವಯುತ ಇತಿಹಾಸ ಹಾಗೂ ಜನಪ್ರಿಯತೆ ಹೊಂದಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಟ್ಟಿನಹಳ್ಳಿ ಗ್ರಾಮದ ದ್ಯಾಮಗಂಗಾ ಹಾಗೂ ಮಾರುತೇಶ್ವರ ಜಾತ್ರೆಯ ನಿಮಿತ್ತ ಎರ್ಪಡಿಸಿದ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಒಲಿಂಪಿಕ್ಸ್‍ದಲ್ಲಿ ಕುಸ್ತಿ ಪ್ರತಿಷ್ಠಿತ ಕ್ರೀಡೆಯಾಗಿದೆ. ಮೊದ ಮೊದಲು ಇದನ್ನು ಮಲ್ಲಯುದ್ಧವೆಂದು ಕರೆಯಲಾಗುತಿತ್ತು. ಇಂದು ಭಾರತೀಯ ಕ್ರೀಡಾ ಪ್ರಾಧಿಕಾರ ಇಂತಹ ಅಪ್ರತಿಮ ಕುಸ್ತಿ ಪಟುಗಳಿಗೆ ತರಬೇತಿ ನೀಡಿ ಪೆÇ್ರೀತ್ಸಾಹಿಸುತ್ತಿದೆ. ಆದ್ಯಾಗಲೂ ಕುಸ್ತಿ ಪಟುತ್ವ ಸಂಖ್ಯೆ ಕುಸಿಯುತ್ತಿರುವದು ಅತ್ಯಂತ ಕಳವಳಕಾರಿ ಸಂಗತಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕದಲ್ಲಿ ದಸರಾ ಕುಸ್ತಿಗಳು ಜಗತ್ಪ್ರಸಿದ್ಧವಾಗಿವೆ ಮೈಸೂರಿನ ದಸರಾ ಉತ್ಸವದಲ್ಲಿ ಕುಸ್ತಿ ಪಂದ್ಯಾವಳಿ ಜರುಗುತ್ತವೆ. ಉತ್ತರ ಕರ್ನಾಟಕದ ಕುಸ್ತಿ ಪಟುಗಳೆ ಬಹುಮಾನ ಪಡೆದುಕೊಳ್ಳುತ್ತಾರೆ. ವಿಶ್ವದ ಹಾಗೂ ರಾಷ್ಟ್ರೀಯ ಕುಸ್ತಿ ಪಂದ್ಯಗಳಲ್ಲಿ ಭಾರತೀಯ ಕುಸ್ತಿ ಪಟುಗಳು ಪ್ರಸಿದ್ಧರಾಗಿದ್ದಾರೆ ಅಲ್ಲದೆ ಮಹಿಳಾ ಕುಸ್ತಿ ಪಟುಗಳು ಸಹ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಗಳಿಸಿದ್ದಾರೆ. ಶಿಕ್ಷಣದ ಜೊತೆಗೆ ಕ್ರೀಡೆಗೂ ಅವಕಾಶ ಹಾಗೂ ಪೆÇ್ರೀತ್ಸಾಹ ಅಗತ್ಯ ಎಂದರು.
ಸಂಘಟಿಕರಾದ ಶ್ರೀಕಾಂತ ಚೌಧರಿ, ಸಿದ್ದು ಪವಾರ, ಜಗನ್ನಾಥ ಚೌಧರಿ, ಚಂದ್ರಶೇಖರ ಮಲಘಾಣ, ಅಶೋಕ ಬಗಲಿ, ರಾಜೇಂದ್ರ ಬಿರಾದಾರ ಅತಿಥಿಗಳನ್ನು ಗೌರವಿಸಿದರು
ಬಸನಗೌಡ ಬಿರಾದಾರ, ಮಲ್ಲಪ್ಪ ಕತ್ನಳ್ಳಿ, ಪ್ರಕಾಶ ಚಿಕ್ಕಲಕಿ, ಈರನಗೌಡ ಬಿರಾದಾರ, ಮುದಸ್ಸರ ವಾಲಿಕಾರ, ರವಿ ಬಿರಾದಾರ, ದುಂಡಪ್ಪ ಬಗಲಿ, ಮಲ್ಲಪ್ಪ ಭಾವಿಕಟ್ಟಿ, ಬಸನಗೌಡ ಬಿರಾದಾರ, ವಿಠ್ಠಲ ಸಾರವಾಡ, ಈರಪ್ಪ ಸಾವಳಗಿ, ಪ್ರಕಾಶ ಚಿಕ್ಕಲಕಿ, ಮಹೇಶ ಮಾಲಗಾರ, ಮಲ್ಲಿಕಾರ್ಜುನ ಕಂಬಾರ, ರಾಮಗೊಂಡ ಪಡಕೋಟಿ, ಶ್ರೀಕಾಂತ ಗೊಂಗಡಿ, ಸಿದ್ದನಗೌಡ ಬಿರಾದಾರ (ಟೇಲರ), ಸುಭಾಷ ಯಂಭತ್ನಾಳ, ಗೌಡಪ್ಪ ಬೆನಕಟ್ಟಿ, ಲಚ್ಚಪ್ಪ ಬಗಲಿ, ಯಲ್ಲಪ್ಪ ದುರ್ಗೊಗೋಳ, ಖಾನಪ್ಪ ಚಿತ್ತಾಪೂರ, ಚಂದ್ರಶೇಖರ ಇಂಡಿ, ಸುರೇಶ ಇಂಡಿ. ಅಪ್ಪು ನಾಟೀಕಾರ ಮುಂತಾದವರು ಉಪಸ್ಥಿತರಿದ್ದರು.