ಕುಸ್ತಿ ಪಟುಗಳ ಮೇಲೆ ಪೊಲೀಸರ ಹಲ್ಲೆ

ನವದೆಹಲಿ,ಮೇ.೪- ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಮೇಲ ಲೈಂಗಿಕ ಕಿರುಕುಳದ ಆರೋಪ ಮಾಡಿ ಕಾನೂನು ಕ್ರಮಕ್ಕೆ ದೆಹಲಿಯ ಜಂತರ್ ಮಂತರ್‍ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಮೇಲೆ ತಡರಾತ್ರಿ ಪಾನಮತ್ತ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಪೊಲೀಸರು ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತ ಹಲವಾರು ಕುಸ್ತಿಪಟುಗಳ ತಲೆಗೆ ಪೆಟ್ಟಾಗಿದ್ದು ಇಬ್ಬರಿಗೆ ಗಾಯಗಳಾಗಿವೆ. ಒಬ್ಬ ವ್ಯಕ್ತಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿಭಟನಾ ಸ್ಥಳಕ್ಕೆ ಮಡಚುವ ಹಾಸಿಗೆಗಳನ್ನು ತರಲು ಕುಸ್ತಿಪಟುಗಳು ಮುಂದಾದಾಗ ಅದನ್ನು ತಡೆದ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕುಸ್ತಿಪಟುಗಳು ದೂರಿದ್ಧಾರೆ. ನಿನ್ನೆ ರಾತ್ರಿ ಪೊಲೀಸರ್ ಕುಸ್ತಿಪಟುಗಳ ಮೇಲೆ ದೈಹಿಕ ಹಲ್ಲೆ ಮಾಡಿದ ನಂತರ ಬಾರಿ ಬಿಗಿ ಭದ್ರತೆ ಒದಗಿಸಲಾಗಿದೆ.
ಪೊಲೀಸರ ಪ್ರಕಾರ, ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರ್ತಿ ಅನುಮತಿಯಿಲ್ಲದೆ ಮಡಿಸುವ ಹಾಸಿಗೆಗಳೊಂದಿಗೆ ಪ್ರತಿಭಟನಾ ಸ್ಥಳಕ್ಕೆ ತಲುಪಿಸಿದರು. ಆಗ ಪೊಲೀಸರು ಮಧ್ಯಪ್ರವೇಶಿಸಿದಾಗ, ಸಣ್ಣ ವಾಗ್ವಾದ ನಡೆಯಿತು, ನಂತರ ಎಎಪಿ ನಾಯಕ ಮತ್ತು ಇತರ ಇಬ್ಬರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಕೆಲವು ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿ ಕುಡಿದ ಅಮಲಿನಲ್ಲಿ ಕುಸ್ತಿಪಟುಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
“ಕುಡಿದ ಪೊಲೀಸ್ ಸಿಬ್ಬಂಧಿ ಧಮೇಂದ್ರ ಅವರು ಕುಸ್ತಿಪಟು ವಿನೇಶ್ ಫೊಗಟ್ ಅವರನ್ನು ನಿಂದಿಸಿ ನಮ್ಮೊಂದಿಗೆ ಜಗಳವಾಡಿದರು” ಎಂದು ಮಾಜಿ ಕುಸ್ತಿಪಟು ರಾಜ್‌ವೀರ್ ಹಾಗು ಒಲಿಂಪಿಯನ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಗೀತಾ ಫೊಗಟ್ ಹೇಳಿದ್ದಾರೆ
ನಮ್ಮನ್ನೂ ಈ ರೀತಿ ನಡೆಸಿಕೊಳ್ಳಬೇಕಾದ ಅಪರಾಧಿಗಳಲ್ಲ ಎಂದು ಏಷ್ಯನ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೊಗಟ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಪದಕ ಹಿಂತಿರುಗಿಸುತ್ತೇವೆ
“ನಾನು ಗೆದ್ದ ಎಲ್ಲಾ ಪದಕಗಳನ್ನು ಸರ್ಕಾರ ಹಿಂದಕ್ಕೆ ತೆಗೆದುಕೊಳ್ಳುವಂತೆ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಹೇಳಿದ್ದಾರೆ.
ಘರ್ಷಣೆಯ ನಂತರ, ಪ್ರತಿಭಟನಾ ಸ್ಥಳದಲ್ಲಿ ಭಾರೀ ಪೊಲೀಸ್ ಪಡೆ ನಿಯೋಜಿಸಲಾಗಿದೆ ಮತ್ತು ಇಡೀ ಪ್ರದೇಶವನ್ನು ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ, ಪ್ರತಿಭಟನಾ ನಿರತ ಕುಸ್ತಿಪಟುಗಳ ಬಳಿಗೆ ಮಾಧ್ಯಮದ ಸಿಬ್ಬಂದಿಗೆ ತೆರಳಲು ಅವಕಾಶ ನೀಡದಂತೆ ಬಿಗಿ ಭದ್ರತೆ ಮಾಡಲಾಗಿದೆ.