ಕುಸ್ತಿ ಪಂದ್ಯಾವಳಿ ಉದ್ಘಾಟಿಸಿದ ಯುವ ನಾಯಕ ಚಿದಾನಂದ ಸವದಿ

ಅಥಣಿ :ಜ.17: ಕುಸ್ತಿಗೆ ಸುದೀರ್ಘವಾದ ಇತಿಹಾಸವಿದೆ. ಯುವ ಜನಾಂಗ ಗ್ರಾಮೀಣ ಕ್ರೀಡೆಗಳತ್ತ ಗಮನ ಹರಿಸಬೇಕು.ಯುವಜನರು ಆಧುನಿಕ ಕ್ರೀಡೆಗಳ ಗುಂಗಿನಿಂದ ಹೊರಬಂದು, ಗ್ರಾಮೀಣ ಕ್ರೀಡೆಗಳನ್ನು ಉಳಿಸಲು ಮುಂದಾಗಬೇಕು ಎಂದು ಕಾಂಗ್ರೆಸ್ ಯುವ ನಾಯಕ ಚಿದಾನಂದ ಸವದಿ ಹೇಳಿದರು
ಅವರು ತಾಲೂಕಿನ ಸಪ್ತಸಾಗರ ಗ್ರಾಮದ ಕಾಶಿಲಿಂಗದೇವರ‌ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡು ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡುತ್ತಿದ್ದರು.ಭಾರತೀಯ ಹೆಮ್ಮೆಯ ಕ್ರೀಡೆಯಾಗಿರುವ ಕುಸ್ತಿಯನ್ನು ಪುನರುಜ್ಜೀವನಗೊಳಿಸಿ ಯುವ ಕುಸ್ತಿಪಟುಗಳನ್ನು ಬೆಳೆಸಬೇಕಾಗಿದೆ. ಕುಸ್ತಿಯಂತಹ ಕ್ರೀಡೆ ಈಗ. ಗ್ರಾಮೀಣ ಭಾಗದಲ್ಲಿ ಜಾತ್ರೆ, ಉತ್ಸವದಂತಹ ಸಂದರ್ಭದಲ್ಲಿ ಕುಸ್ತಿಯನ್ನು ಇಂದಿಗೂ ನಡೆಸಿಕೊಂಡು ಬರುತ್ತಿರುವುದು ಹಾಗೂ ಅದರ ಜೀವಂತಿಕೆಯನ್ನು ಕಾಪಾಡುವ ಕೆಲಸವನ್ನು ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಸಂಘಟಕರಿಗೆ ಧನ್ಯವಾದಗಳನ್ನ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಸವಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಈ ವೇಳೆ ಮುಖಂಡರಾದ ಡಾ. ಪದ್ಮಜಿತ ನಾಡಗೌಡ. ಶ್ರೀಶೈಲ ನಾಯಿಕ, ಎಸ್.ಆರ್. ಗೂಳಪ್ಪನವರ, ಭರತೇಶ್ ನಾಡಗೌಡ, ‌ಆರ್ ಎ ಪಾಟೀಲ್, ನಾರಾಯಣ ಘೋರ್ಪಡೆ, ಬಾಬಲಾಲ್ ನದಾಫ್. ಮಲ್ಲಪ್ಪ ದರೂರ, ಪರಮಾನಂದ ತೇಲಿ, ರಾವಸಾಬ್ ಪಾಟೀಲ್, ದರೆಪ್ಪಾ ಚುನಾರ ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮಸ್ಥರು, ಕುಸ್ತಿಪಟುಗಳು ಪಾಲ್ಗೊಂಡಿದ್ದರು.