ಕುಸ್ತಿ ಪಂದ್ಯಾವಳಿಯಲ್ಲಿ ಚಿನ್ನದ ಪದಕ

ದಾವಣಗೆರೆ.ಮೇ.೨೮; ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಪಟು ಖೇಲೋ ಇಂಡಿಯಾ ಗ್ರಿಕೋ ರೋಮನ್ ಕುಸ್ತಿ ಪಂದ್ಯಾವಳಿಯಲ್ಲಿ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಚಿನ್ನದ ಪದಕವನ್ನು ಪಡೆಯುವುದರ ಮೂಲಕ   ಕಾಲೇಜಿನ ಕೀರ್ತೀಗೆ ಪಾತ್ರರಾಗಿದ್ದಾರೆ. ಕಾಶಿನಾಥ್ ಬೀಳಗಿ ಮತ್ತು  ದೈಹಿಕ ಶಿಕ್ಷಣ ನಿರ್ದೇಶಕಿ ರೇಖಾ ಅವರಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ . ಅಂಜನಪ್ಪ ಕ್ರೀಡಾ ಸಮಿತಿ ಸದಸ್ಯರಾದ ಪ್ರೊ .ಭೀಮಣ್ಣ. ಸುಣಗಾರ , ಡಾ . ನಾರಾಯಣಸ್ವಾಮಿ , ಡಾ . ಸದಾಶಿವ , ಡಾ . ಯಶೋಧ  ಡಾ. ಷಣ್ಮುಖ .ಬಾದಾಮಿ ಪ್ರೊ .ವೆಂಕಟೇಶ ಬಾಬು ,  ಪ್ರೊ . ಜ್ಯೊತಿ ಪತ್ರಾಂಕಿತ ವ್ಯವಸ್ಥಾಪಕರಾದ ಗೀತಾದೇವಿ ಮತ್ತು ಸಿಬ್ಬಂದಿ ವರ್ಗ ಹಾಗು ವಿದ್ಯಾರ್ಥಿಗಳು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.