ಕುಸ್ತಿ ಪಂದ್ಯಾಟಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯ ತಂಡ

ಕಲಬುರಗಿ,ಜ.20:ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಜನವರಿ 22ರಿಂದ 29ರವರೆಗೆ ಜರುಗಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕುಸ್ತಿ(ಪುರುಷ) ಪಂದ್ಯಾಟದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕುಸ್ತಿ(ಪುರುಷ) ತಂಡವು ಭಾಗವಹಿಸುತ್ತಿದೆ.
ತಂಡದ ನಾಯಕನಾಗಿ ಘಾಳೆಪ್ಪ, ತಂಡದ ಸದಸ್ಯರಾಗಿ ಮಂಜುನಾಥ್, ರಮೇಶ್, ವೆಂಕಟೇಶ್, ರಾಘವೇಂದ್ರ, ಪ್ರಶಾಂತ್, ಸಂತೋಷ್, ಮಾಳಪ್ಪ, ಬೀರಣ್ಣಾ, ರಾಹುಲ್ ಮತ್ತು ಜಗನಾಥ್ ಅವರು ಭಾಗವಹಿಸುವರು. ತಂಡದ ವ್ಯವಸ್ಥಾಪಕರಾಗಿ/ ತರಬೇತುದಾರರಾಗಿ ಬೀದರ್ ಸರ್ಕಾರಿ ಪ್ರಥಮ ದರ್ಜೆ ದೈಹಿಕ ಶಿಕ್ಷಣ ಬೋಧಕ ಬಾಲಸುಭ್ರಮಣಿಂ ಅವರು ಭಾಗವಹಿಸುವರು.
ತಂಡದ ಯಶಸ್ವಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ್ ಅಗಸರ್, ಕುಲಸಚಿವರಾದ ಡಾ. ಬಿ. ಶರಣಪ್ಪ, ಡಾ. ಎನ್.ಜಿ. ಕಣ್ಣೂರ್, ಡಾ. ಎಚ್.ಎಸ್. ಜಂಗೆ, ಪ್ರೊ. ಜಿ. ರಾಮುಲು, ಅರುಣಕುಮಾರ್ ಅವರು ತಂಡಕ್ಕೆ ಶುಭ ಹಾರೈಸಿದ್ದಾರೆ.