ಕುಸ್ತಿ ಪಂದ್ಯದ ಗಲಾಟೆ: ಹಲ್ಲೆ ನಡೆಸಿ ಜೀವ ಬೆದರಿಕೆ

ಕಲಬುರಗಿ,ಜೂ.16-ತಾಲ್ಲೂಕಿನ ಭೀಮಳ್ಳಿ ಗ್ರಾಮದ ಮಹಾಲಕ್ಷ್ಮೀ ದೇವಿ ಜಾತ್ರೆ ಪ್ರಯುಕ್ತ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಗಲಾಟೆಯಾಗಿದೆ.
ಈ ಗಲಾಟೆಯ ನಂತರ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಆಸೀಫ್ ಮತ್ತು ಇತರರು ತಮ್ಮ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ರತ್ನದೀಪ ಜಾಧವ್ ಎಂಬುವವರು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಘಟನೆ ವಿವರ:
ಭೀಮಳ್ಳಿ ಗ್ರಾಮದಲ್ಲಿ ಮಹಾಲಕ್ಷ್ಮೀದೇವಿ ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಗ್ರಾಮದ ಜಗ್ಗು ಚೋರಗಸ್ತಿ ಮತ್ತು ಆಸೀಫ್ ಮಧ್ಯೆ ಕುಸ್ತಿ ನಡೆದಿತ್ತು. ಜಗ್ಗು ಚೋರಗಸ್ತಿ ಕುಸ್ತಿಯಲ್ಲಿ ಗೆದ್ದಿದ್ದು, ಇದನ್ನು ಒಪ್ಪದ ಆಸೀಫ್ ಮತ್ತು ಇತರರು ಕುಸ್ತಿ ಆಗಿಲ್ಲ ಎಂದು ಗಲಾಟೆ ಮಾಡಿದ್ದರಿಂದ ಕುಸ್ತಿ ಪಂದ್ಯವನ್ನು ಅಲ್ಲಿಗೆ ಮುಕ್ತಾಯ ಮಾಡಲಾಗಿತ್ತು. ಇದಾದ ನಂತರ ರತ್ನದೀಪ ಜಾಧವ್ ಅವರು ಪ್ರಜ್ವಲ್, ನಿಖಿಲ ಚೋರಗಸ್ತಿ ಜೊತೆಗೆ ಭೀಮಳ್ಳಿಯಿಂದ ಅಷ್ಠಗಿ ಕಡೆಗೆ ಹೋಗುತ್ತಿದ್ದಾಗ ಆಸೀಫ್, ಜಮ್ಮು, ಸೈಫನ್ ಅವರು ಅವರನ್ನು ತಡೆದು ರತ್ನದೀಪ ಜಾಧವ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಈ ಸಂಬಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.