ಕುಸ್ತಿಪಟುಗಳ ಹೋರಾಟ ಹತ್ತಿಕ್ಕುವ ಪ್ರ ಯತ್ನ: ಸಂಘಟನೆಗಳಿಂದ ಪ್ರತಿಭಟನೆ

ದಾವಣಗೆರೆ.ಮೇ.೨೯; ದೆಹಲಿಯಲ್ಲಿ ನಡೆಯಬೇಕಿದ್ದ ಮಹಿಳಾ ಮಹಾಪಂಚಾಯತ್ ಹೋರಾಟವನ್ನು ಭಂಗಗೊಳಿಸಲು ವಿವಿಧ ಸಂಘಟನೆಯ ನಾಯಕರನ್ನು ಬಂಧಿಸಿರುವುದನ್ನು ಖಂಡಿಸಿ‌ ಎಐಎಂಎಸ್ ಎಸ್ ಹಾಗೂ ಎಐಕೆಕೆಎಂಎಸ್ ಸಂಘಟನೆಗಳ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಎಐಎಂಎಸ್ ಎಸ್ ನ ರಾಜ್ಯ ಅಧ್ಯಕ್ಷರಾದ ಕಾಮ್ರೆಡ್ ಅಪರ್ಣ ಬಿ .ಆರ್ ಮಾತನಾಡಿ ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಹೋರಾಟಕ್ಕೆ ಬೆಂಬಲವಾಗಿ  ಹೊಸ ಸಂಸತ್ ಭವನದೆದುರು ನಡೆಯಬೇಕೆಂದು ಯೋಚಿಸಲಾಗಿದ್ದ ಮಹಿಳಾ ಮಹಾಪಂಚಾಯತ್ ಕಾರ್ಯಕ್ರಮವನ್ನು ಭಂಗಗೊಳಿಸುವ ಉದ್ದೇಶದೊಂದಿಗೆ, ದೆಹಲಿಯಲ್ಲಿ ಕೇಂದ್ರೀಯ ಬಿಜೆಪಿ ಸರ್ಕಾರವು ನಿರ್ದೇಶಿಸಿರುವಂತೆ, ದೆಹಲಿ ಎಐಎಂಎಸ್ ರಾಜ್ಯ ಕಾರ್ಯದರ್ಶಿ ಮಿಸ್ ರಿತು ಕೌಶಿಕ್ ಹಾಗೂ ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆಯ ಹರಿಯಾಣ ರಾಜ್ಯಕಾರ್ಯದರ್ಶಿ ಕಾಮ್ರೇಡ್ ಜೈಕರಣ ಮಂಡೋತಿ,ಎಸ್ ಯುಸಿಐ ಪಕ್ಷದ ಹರಿಯಾಣ ರಾಜ್ಯ ಸಮಿತಿಯ ಪ್ರಮುಖ ಸದಸ್ಯ ರಾಜೇಂದರ್ ಸಿಂಗ್*  ರವರನ್ನು ಹಾಗೂ *ಹೋರಾಟ ನಿರತ ಕುಸ್ತಿಪಟುಗಳನ್ನು* ಬಂಧಿಸಿರುವ ದೆಹಲಿ ಪೊಲೀಸರ ಅಪ್ರಜಾತಾಂತ್ರಿಕ ಹಾಗೂ ಧಮನಕಾರಿ ಕ್ರಿಯೆಯನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು ಬಲವಾಗಿ ಖಂಡಿಸುತ್ತಿದೆ, ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟಿಸುತ್ತ ಅವರುಗಳು ಆಡಳಿತ ರೂಢ ಬಿಜೆಪಿ ಸರ್ಕಾರದ ಹಾಲಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು. ಸಾಮಾನ್ಯ ಜನತೆ ಹಾಗೂ ನಿರ್ದಿಷ್ಟವಾಗಿ ಮಹಿಳೆಯರು ಮುಂದೆ ಬಂದು ಬಿಜೆಪಿ ಸರ್ಕಾರದ ಈ ಕ್ರಿಯೆಯನ್ನು ಖಂಡಿಸಿ, ನ್ಯಾಯದ ಪರ ಹೋರಾಡುತ್ತಿರುವ ಮತ್ತು ಮಹಿಳಾ ಕುಸ್ತಿಪಟುಗಳಿಗೆ ಬಲವಾಗಿ ಇನ್ನು ಪ್ರಬಲವಾದ ಚಳುವಳಿಗಳನ್ನು ನಡೆಸುತ್ತಿರುವ ಬಂಧಿತರನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಮತ್ತು ಅಪರಾಧವೆಸಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಈ ಕೂಡಲೇ ಬಂಧಿಸುವಂತೆ  ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಎ.ಐ.ಎಂ.ಎಸ್.ಎಸ್  ಜಿಲ್ಲಾ ಕಾರ್ಯದರ್ಶಿ ಭಾರತಿ, ಜಿಲ್ಲಾ ಸಮಿತಿ ಸದಸ್ಯೆ ಮಮತಾ,ಎ.ಐ.ಕೆ.ಕೆ.ಎಮ್.ಎಸ್ ನ ಜಿಲ್ಲಾಧ್ಯಕ್ಷರಾದ ಮಧು ತೊಗಲೇರಿ, ಕಾರ್ಯದರ್ಶಿ ನಾಗಸ್ಮಿತ, ಎಐಡಿಎಸ್ ಓನ ಕಾವ್ಯ, ಸುಮನ್. ಹಾಗೂ ತಿಪ್ಪೇಸ್ವಾಮಿ , ಮಂಜುನಾಥ್ ಕುಕ್ಕವಾಡ, ಶಿವಾಜಿ ರಾವ್ ಮಂಜುನಾಥ್ ಕೈದಾಳ್ , ಶ್ರೀಕಾಂತ್ ಇನ್ನಿತರರು ಪಾಲ್ಗೊಂಡಿದ್ದರು.