
ವಾಡಿ:ಮಾ.19: ಹೊಲದಲ್ಲಿ ಬೆಳೆದು ನಿಂತ ಕುಸುಬಿ ಹೊಲಕ್ಕೆ ಬೆಂಕಿ ತಗುಲಿದ ಪರಿಣಾಮ ಬೆಳೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿರುವ ಘಟನೆ ಶನಿವಾರ ನಡೆದಿದೆ. ಕಮರವಾಡಿ ಗ್ರಾಮದ ಸರ್ವೇ ನಂಬರ್ 118 ಶರಣಪ್ಪ ತಂದೆ ರಾಮಣ್ಣ ತಳವಾರ ಎನ್ನುವುರಿಗೆ ಸೇರಿದ 4.ಎಕರೆ ಜಮೀನಿಗೆ ಬೆಂಕಿ ತಗುಲಿ ಬೆಳೆ ನಷ್ಟವಾಗಿದ್ದು ಕೈಗಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಸಾಲಸೂಲ ಮಾಡಿ ಬಿತ್ತನೆ ಮಾಡಿದ ಬೆಳೆ ಕಣ್ಣೆದುರೇ ನಾಶವಾಗಿದ್ದನ್ನು ಕಂಡ ರೈತ ಮರಗುವಂತೆ ಮಾಡಿದೆ. ಬೆಳೆದು ನಿಂತ ಬೆಳೆ ಕೈಗೆ ಬಾರದೆ ತೀವ್ರ ಸಂಕಷ್ಟಕ್ಕೆ ದೂಡಿದೆ. ಪಕ್ಕದ ಹೊಲಕ್ಕೆ ಹತ್ತಿಕೊಂಡ ಬೆಂಕಿ ಏಕಾಏಕಿ ಕುಸುಬಿ ಹೊಲಕ್ಕೆ ತಗುಲಿ ರಾಶಿ ಮಾಡಲು ಬಂದ ಬೆಳೆ ಬೆಂಕಿಗೆ ಆಹುತಿಯಾಗಿದೆ. ಸರಕಾರ ರೈತನ ನೆರವಿಗೆ ಬರಬೇಕು ಎನ್ನುವುದು ರೈತನ ಅಳಲಾಗಿದೆ. ಹಾನಿಯಾಗಿರುವ ಬೆಳೆಯ ಪರಿಹಾರ ನೀಡಲು ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ರೈತ ಒತ್ತಾಯಿಸಿದ್ದಾನೆ.