ಲಕ್ಷ್ಮೇಶ್ವರ, ಏ5 : ಒಕ್ಕಲಿಗಾಗಿ ರಸ್ತೆಯಲ್ಲಿ ರಾಶಿ ಹಾಕಿದ್ದ ಕುಸುಬಿ ಫಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕ್ಷಣಾರ್ಧದಲ್ಲಿ ಇಡೀ ಫಸಲು ಸುಟ್ಟು ಕರಕಲಾದ ಘಟನೆ ಸಮೀಪದ ಗೊಜನೂರು ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಮಂಜಪ್ಪ ಸಂದಿಗವಾಡ ಎಂಬ ರೈತರು ಕುಸುಬಿಯನ್ನು ಕೊಯ್ಲು ಮಾಡಿ ಒಕ್ಕಣಿಗಾಗಿ ರಸ್ತೆಯಲ್ಲಿ ಹಾಕಿದ್ದರು. ಈ ಸಮಯದಲ್ಲಿ ಕುಸುಬಿ ರಾಶಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತು ಎಂದು ತಿಳಿದು ಬಂದಿದೆ. ಕುಸುಬಿ ಬೆಳೆಗಾರನಿಗೆ ನಷ್ಟ ತುಂಬಿ ಕೊಡಬೇಕು ಎಂದು ಗ್ರಾಮದ ರೈತ ಮುಖಂಡ ಚನ್ನಪ್ಪ ಷಣ್ಮುಖಿ ಆಗ್ರಹಿಸಿದ್ದಾರೆ.