ಕುಸಿಯುತ್ತಿರುವ ಶೈಕ್ಷಣಿಕ ಮಟ್ಟ ; ವಿಷಾಧ

ಹಿರಿಯೂರು ಮೇ 31: ಕೊರೋನ ಲಾಕ್ಡೌನ್ ಹೇರಿರುವುದರಿಂದ ಶಾಲಾ-ಕಾಲೇಜುಗಳು ಕಾರ್ಯನಿರ್ವಹಿಸದೆ, ಪ್ರಾಥಮಿಕ ಹಂತದಿಂದಲೇ ಪದವಿಪೂರ್ವ ಪದವಿ, ಸ್ನಾತಕೋತ್ತರ ಪದವಿ, ಹೀಗೆ ಎಲ್ಲಾ  ಶಾಲಾ-ಕಾಲೇಜುಗಳ ಆನ್ಲೈನ್ ಕ್ಲಾಸ್ಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ ಗಳಿಗೆ ಹಾಜರಾಗಬೇಕು, ಆ ಮೂಲಕ ನೋಟ್ಸ್ ಮಾಡಿಕೊಳ್ಳಬೇಕು, ಅದಕ್ಕೆ ಅನೇಕ ಪುಸ್ತಕಗಳು ಪಠ್ಯಪುಸ್ತಕಗಳು ನೋಟ್ ಬುಕ್ ಗಳು  ಪೆನ್ ಪೆನ್ಸಿಲ್ ಪೇಪರ್ ಬೇಕಾಗುತ್ತದೆ. ಇದಕ್ಕೆ ಪುಸ್ತಕದ ಅಂಗಡಿಗಳು   ಮುಚ್ಚಿರುವುದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಶೈಕ್ಷಣಿಕ ಮಟ್ಟ  ಕುಸಿಯುವುದಕ್ಕೆ  ಇದು ಸಹ ಕಾರಣವಾಗುತ್ತಿದೆ. ವಿದ್ಯಾರ್ಥಿಗಳ  ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು, ಇದನ್ನು ಗಮನದಲ್ಲಿಟ್ಟುಕೊಂಡು ಪುಸ್ತಕದ ಅಂಗಡಿಗಳನ್ನು ಈಗಿರುವ ಕಾಲಮಿತಿಯೊಳಗೆ   ತೆರೆಯುವ ಅವಕಾಶವನ್ನು ಕಲ್ಪಿಸಿದರೆ, ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಮಾಡಿದಂತಾಗುತ್ತದೆ, ಶಿಕ್ಷಣಕ್ಕೆ ಸಹಕಾರ ನೀಡಿದಂತಾಗುತ್ತದೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರ ಪರವಾಗಿ ಹಿರಿಯೂರಿನ ಸಾಹಿತಿ ಎಂ ಕಿರಣ್ ಮಿರಜ್ಕರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.