ಕುಸರಂಪಳ್ಳಿ ಚೆಕ್ ಪೋಸ್ಟ್ ನಲ್ಲಿ 2.29 ಲಕ್ಷ.ರೂ ವಶ

ಚಿಂಚೋಳಿ,ಏ.17: ತಾಲೂಕಿನ ಕುಸರಂಪಳ್ಳಿ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದ 2,29,150 ರೂಗಳನ್ನು ವಶಕ್ಕೆ ಪಡೆಯಲಾಗಿದೆ.
ಬೀದರ್ ಲೋಕಸಭಾ ಚುನಾವಣೆ ಸಂಬಂಧ ಚೆಕ್ ಪೋಸ್ಟ್ ಗಳಲ್ಲಿ ನಡೆಯುತ್ತಿರುವ ತಪಾಸಣೆ ವೇಳೆ ಹಣ ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭದಲ್ಲಿ ತಪಾಸಣಾ ಅಧಿಕಾರಿಗಳಾದ ಪ್ರಭುಲಿಂಗ,ಅಬ್ದುಲ್ ಜಾವೇದ್ ಪಟೇಲ್, ಜಗನ್ನಾಥ್ ರೆಡ್ಡಿ, ವೀರೇಂದ್ರ ಜಾಬಶೇಟ್ಟಿ, ಪೆÇಲೀಸ್ ಸಿಬ್ಬಂದಿಗಳಾದ ಹಂಸಪ್ಪಾರೆಡ್ಡಿ, ಒಮನ ರಾವ್, ಸುನೀಲ್ ದತ್ತ ಮತ್ತು ಭೀಮಣ್ಣ ರಂಗನಾಥ್ ಚಂದಮನೂರು ಇದ್ದರು
ಕುಸ್ರಂಪಲ್ಲಿ ಚೆಕ್ ಪೆÇೀಸ್ಟ್ ಮಾರ್ಗವಾಗಿ ಚಿಂಚೋಳಿ ತೆರಳುತ್ತಿದ್ದ ದ್ವಿಚಕ್ರ ವಾಹನದಲ್ಲಿ ಹಣ ಸಾಗಿಸುತ್ತಿದ್ದ ವೇಳೆ ಎಸ್.ಎಸ್.ಟಿ.ತಂಡ 2,29,150 ಲಕ್ಷ ರೂಗಳನ್ನು ಜಪ್ತಿ ಮಾಡಿದೆ.
ಈ ಹಣವನ್ನು ಸಹಾಯಕ ಚುನಾವಣಾ ಅಧಿಕಾರಿಗಳು ಮತ್ತು ತಹಸೀಲ್ದಾರ್ ನಿರ್ದೇಶನದಂತೆ ಖಜಾನೆಯ ಭದ್ರತಾ ಕೊಠಡಿಗೆ ರವಾನಿಸಲಾಗಿದೆ.