ಕಲಬುರಗಿ :ಜೂ.4: ಜಿಲ್ಲೆಯ ಕುಸನೂರ ಗ್ರಾಮದಲ್ಲಿ ಕಾರ ಹುಣ್ಣಿಮೆ ಸಡಗರ ಕಳೆಗಟ್ಟಿತ್ತು ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವು ಸಹ ರೈತರು ತಮ್ಮ ಒಡನಾಡಿ ಎತ್ತುಗಳನ್ನು ಶೃಂಗಾರ ಮಾಡಿ ಬೆಳಗ್ಗೆ 11:30 ರಿಂದ ಊರಿನ ಎಲ್ಲ ರೈತರು ಎತ್ತುಗಳನ್ನು ಗ್ರಾಮ ಪಂಚಾಯಿತಿಯಿಂದ ಅಗಸಿಯವರಿಗೆ ಮೆರವಣಿಗೆ ಮಾಡಿ ನಂತರ 5 ಗಂಟೆಗೆ ಎತ್ತಿನ ಬಂಡಿ ಕಟ್ಟಿ ಗ್ರಾಮವೆಲ್ಲಾ ಓಡಾಡಿಸಿ ಸಂಭ್ರಮಾಚರಿಸಿದರು.
ನಂತರ 6 ಗಂಟೆಗೆ ಕರಿ ಕಡಿಯಲಾಯಿತು ಕರಿ ಕಡಿದ ಎತ್ತುಗಳ ಮಾಲೀಕರಾದ ಬೀರಣ್ಣ ಬಿ ದುಂಡಾಣಿ ಅವರ ಎತ್ತು ಪ್ರಥಮ ಸ್ಥಾನ ಮತ್ತು ರೇವಪ್ಪ ಎ ತೆಗಿನಮನಿ ಅವರ ಎತ್ತು ಎರಡನೇ ಸ್ಥಾನ ಪಡೆದಿದೆ.
ಇನ್ನು, ಕಾರ ಹುಣ್ಣಿಮೆ ಹಿನ್ನಲೆ ಗ್ರಾಮ ದೇವತೆ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಗುಂಡು ಕಲ್ಲು ಎತ್ತುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಮಕ್ಕಳು ಸೇರಿ ಯುವಕರು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಶಕ್ತಿ ಪ್ರದರ್ಶಿಸಿದರು.
ಈ ಸ್ಪರ್ಧೆಯಲ್ಲಿ ಮೊದಲನೇ ವಿಜೇತರಾದ ಕೋತಲಪ್ಪ ಕರಗಾರ್ ಪ್ರಥಮ ಬಹುಮಾನ ಬೆಳ್ಳಿ ಖಡ್ಗ ಮತ್ತು ಎರಡನೇ ಬಹುಮಾನ ವಿಜೇತರಾದ ಸಿದ್ದು ಕೆ ಪೆÇಲೀಸ್ ಪಾಟೀಲ್ ಇವರಿಗೆ ಬೆಳ್ಳಿ ಉಂಗುರವನ್ನು ಕುಸನೂರ ಗ್ರಾಮ ಪಂಚಾಯಿತಿಯ ಸದಸ್ಯರಾದ ಕುಪೇಂದ್ರ ಎಮ್ ಬರಗಾಲಿಯವರು ತಮ್ಮ ಸ್ವಂತ ಖರ್ಚಿನಿಂದ ಈ ಎಲ್ಲಾ ಕಾರ್ಯಕ್ರಮಗಳನ್ನು ನಿರ್ವಹಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಕುಸುನೂರ್ ಗ್ರಾಮದ ಮುಖಂಡರಾದ ಮಲ್ಲಯ್ಯ ಸ್ವಾಮಿ ವಿಠ್ಠಲ್ ಎಸ್ ಬರಗಾಲಿ,ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಪರಮೇಶ್ವರ್ ಏನ್ ಭಟ್ಟರಕಿ, ಕುಸನೂರ ಗ್ರಾಮ ಪಂಚಾಯತಿ ಸದಸ್ಯರಾದ ಆನಂದ್ ಜಿ ಪವಾರ್, ರೇವಣಸಿದ್ದಪ್ಪ ಚೆಂಗಟಿ ಶಿವಲಿಂಗ್ ಎಮ್ ಸಾವಳಗಿ ರಮೇಶ್ ತೆಗ್ಗಿನಮನಿ ರೇವಣಸಿದ್ಧ ಗುಂಡ್ಬಿಡ್ತಿ ಎಲ್ಲ ಲಿಂಗೊಳಿ ಸಿದ್ದು ಹೊಸಮನಿ ಚನ್ನು ಬರಗಾಲಿ ಶರಣಪ್ಪ ಎಮ್ ಬರಗಾಲಿ, ಶರಣು ಬಬಲಾದ ಹಾಗೂ ಗ್ರಾಮದ ಹಿರಿಯರು ಯುವಕರು ಉಪಸ್ಥಿತರಿದ್ದರು