ಕುಸನೂರು ಗ್ರಾಮದಲ್ಲಿ ಪೌರತ್ವ ತರಬೇತಿ ಶಿಬಿರ

ಕಲಬುರಗಿ,ಮಾ.22: ನಗರದ ರೇಷ್ಮೆ ಎಜುಕೇಶನ ಅಂಡ್ ಚಾರಿಟೇಬಲ್ ಟ್ರಸ್ಟ್ ಕುಮಾರಿ ಶರಣೇಶ್ವರಿ ರೇಷ್ಮೆ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ವತಿಯಿಂದ ಕುಸನೂರ್ ಗ್ರಾಮದಲ್ಲಿ ಪೌರತ್ವ ತರಬೇತಿ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಯೋಗ ಮತ್ತು ಧ್ಯಾನದೊಂದಿಗೆ ಪ್ರಾರಂಭಿಸಲಾಯಿತು. ಮುಖ್ಯ ಅತಿಥಿಗಳಾದ ಡಾ. ಜಗನಾಥ್ ಪಟ್ಟಣಕರ್, ಪ್ರಾಚಾರ್ಯರಾದ ಡಾ. ಗೀತಾ ಆರ್ ಎಂ ಹಾಗೂ ವೇದಿಕೆ ಅಲಂಕರಿಸಿದ ಎಲ್ಲಾ ಅತಿಥಿಗಳೊಂದಿಗೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ಈ ಶಿಬಿರವನ್ನು ಉದ್ದೇಶಿಸಿ ಮುಖ್ಯ ಅತಿಥಿಗಳಾದ ಸೇಡಂಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಜಗನ್ನಾಥ್ ಪಟ್ಟಣಕರ್ ಅವರು ಶಿಬಿರವನ್ನು ಉದ್ದೇಶಿಸಿ ಪೌರತ್ವ ತರಬೇತಿ ಶಿಬಿರದ ಕುರಿತು ಮಾತನಾಡಿದರು.ಗ್ರಾಪಂ ಸದಸ್ಯ ರೇವಣಸಿದ್ದಯ್ಯ ಮಠಪತಿ,ರಮೇಶ್ ತೆಗ್ಗಿನಮನಿ, ಉಪನ್ಯಾಸಕರಾದ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಮೈಬೂಬ್ ಸಾಬ್,ಜಯಲಕ್ಷ್ಮಿ ಪಾಟೀಲ್ ಅನಿಲ್ ಜಿ. ಜಾಧವ್, ಕುಮಾರಿ ಶಿವಲೀಲಾ,ಶ್ವೇತಾ ಜೊತೆಗೆ ಎಲ್ಲಾ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.