ಬೀದರ:ಜೂ.14: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನೆ ಕಾರ್ಯಕ್ರಮದಡಿಯಲ್ಲಿ ಜೂ 19 ರಿಂದ ಜು 6 ರ ವರೆಗೆ ಕುಷ್ಠ ರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲ್ಲಾಗಿದೆ ಸಮಾಜದಲ್ಲಿ ಯಾವುದೇ ವ್ಯಕ್ತಿಗಳಿಗೆ ಕುಷ್ಠರೋಗ ಲಕ್ಷಣಗಳಾದ ಸ್ಪರ್ಶ ಜ್ಞಾನ ನೋವು ನವೆ ಇಲ್ಲದ ತಿಳಿ ಬಿಳಿ ತಾಮ್ರ ಬಣ್ಣದ ಮಚ್ಚೆಗಳು ಎಣ್ಣೆಯುಕ್ತ ಚರ್ಮ. ದೇಹದ್ದ ಮೇಲೆ ಗಂಟುಗಳು, ಕಣ್ಣಿನ ರೆಪ್ಪೆಗಳನ್ನು ಮುಚ್ಷಚಲು ಅಸಮರ್ಥತೆ ಅಥವಾ ನರಗಳು ಉಥ ಮತ್ತು ಕೈ ಕಾಲು ಜೋಮು ಉಂಟಾಗುವುದು, ಮಚ್ಚೆಯ ಜಾಗದಲ್ಲಿ ಕೂದಲುಗಳು ಉದುರುವಿಕೆ ಇವು ಕುಷ್ಠರೋಗದ ಲಕ್ಷಣಗಳಾಗಿವೆ ಇದು ಒಂದು ಕೇವಲ ನರ ಮತ್ತು ಚರ್ಮದ ಸಂಬಂದಿಸಿದ ಕಾಯಿಲೆ. ಹಾಗೂ ಕುಷ್ಠರೋಗದಿಂದ ಉಂಟಾಗುವ ಅಂಗವಿಕಲತೆಗಳ ಬಗ್ಗೆ.
ಹಾಗೂ ನೆರೆ-ಹೊರೆ ವ್ಯಕ್ತಿಗಳಿಗೆ ಸೂಕ್ತ ತಿಳುವಳಿಕೆ ನೀಡಿ, ಅವಶ್ಯಕ ಚಿಕಿತ್ಸೆ ನೀಡುವಾಗ ಬೇಧ-ಬಾವ ಮಾಡದೇ ಗೌರವಯುಕ್ತವಾಗಿ ಉಪಚರಿಸಿ, ರೋಗಿ ಗುಣಮುಖಹೊಂದಲು ಸಹಕರಿಸಿ ಸಮಾಜದಲ್ಲಿ ರೋಗದ ಬಗ್ಗೆ ಸೂಕ್ತ ತಿಳುವಳಿಕೆ ನೀಡಿ ಪ್ರಾರಂಭದ ಹಂತದಲ್ಲೆ ರೋಗ ಪತ್ತೆ ಮಾಡಿ ಬಹು ಔಷದಿ ಚಿಕಿತ್ಸೆ ಪಡೆಯುವುದರಿಂದ ಸಂಪೂರ್ಣವಾಗಿ ಗುಣಮುಖರಾಗುವುದಲ್ಲದೆ, ಮುಂದಾಗಬಹುದಾದ ವಿಕಲಾಂಗತೆಯನ್ನು ಕೂಡ ತಡೆಗಟ್ಟಬಹುದು, ಇದಕ್ಕೆಲ್ಲಾ ಮಿಗಿಲಾಗಿ ಸಮಾಜದಲ್ಲಿರುವ ನಾವೆಲ್ಲರು ಒಗ್ಗಟ್ಟಾಗಿ ಈ ದಿಸೆಯಲ್ಲಿ ಕೆಲಸ ಮಾಡಿದರೆ ಗಾಂಧೀಜಿಯವರ ಕನಸು “ಕುಷ್ಠರೋಗ ಮುಕ್ತ ಭಾರತವನ್ನು” ಭವಿಷ್ಯದಲ್ಲಿ ನಿರ್ಮಿಸಬಹುದಾಗಿದೆ ಎಂದು ಬೀದರ ತಾಲೂಕಿನ ಆರೋಗ್ಯ ಸಿಬ್ಬಂದಿಗಳಿಗೆ ಹಮ್ಮಿಕೋಂಡಿರುವ ತರಬೇತಿಯಲ್ಲಿ ಜಿಲ್ಲಾ ಕುಷ್ಠರೋಗ ಅಧಿಕಾರಿಗಳಾದ ಡಾ.ಕಿರಣ ಪಾಟಿಲ ರವರು ತಿಳಿಸಿದರು.
ಕುಷ್ಠರೋಗವು ಒಂದು ಸಾಂಕ್ರಾಮಿಕ ರೋಗ, ಇದು ಯಾವುದೇ ಶಾಪ ಪಾಪ ದಿಂದ ಬರುವುದಿಲ್ಲ ಈ ಕಾಯಿಲೆ ಮೈಕೋ ಬ್ಯಾಕ್ಟ್ರೀಯಾ ಲೆಪ್ರೆ ಎಂಬ ರೋಗಾಣುವಿನಿಂದ ಬರುತ್ತದೆ ಈ ಬ್ಯಾಕ್ಟ್ರೀಯಾಗಳು ಸೋಕಿತ ವೈಕ್ತಿಯ ಸೀನುವುದರ ಹಾಗೂ ಖೆಮುವ ಮೂಲಕ ಹೊರಬಂದು ಗಾಳಿಯ ಸೆರಿಕೋಂಡು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಕಾಯಿಲೆಯಿಂದ ಹೆದರ ಬೇಕಾಗುವುದಿಲ್ಲಾ. ಅದನು ಗುಪ್ತವಾಗಿಡದೆ ತಮ್ಮ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿಗಳ ಗಮನಕ್ಕೆ ತಂದು, ಪ್ರಾರಂಭಿಕ ಹಂತದಲ್ಲೆ ಪತ್ತೆ ಹಚ್ಚಿ ಬಹು ಔಷಧಿಂದ ಸಂಪೂರ್ಣವಾಗಿ ಗುಣಪಡಿಸಬಹುದು ಆದರಿಂದ ಪ್ರತಿ ತಂಡದಲ್ಲಿ ಒಬ್ಬರು ಮಹಿಳೆ ತಪಾಸಣೆಗಾರರು ಮತ್ತು ಒಬ್ಬರು ಪುರುಷ ತಪಾಸಣೆಗಾರರು ಇರುವಂತೆ ನೋಡಿಕೊಳ್ಳುವುದು ಮನೆ ಮನೆಗೆ ಚರ್ಮರೂಗ ಪರಿಕ್ಷೆಗೆ ಹೋದಾಗ ಮನೆಯಲ್ಲಿನ ಎಲ್ಲಾ ಸದ್ಯರಿಗೆ ಸಂಪೂರ್ಣವಾಗಿ ತಪಾಸಣೆ ಮಾಡಬೇಕೇಂದು ವೀರಶೇಟ್ಟಿ ಚನಶೇಟ್ಟಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ತಿಳಿಸಿದರು. ತರಬೇತಿಯಲ್ಲಿ ಓಂಕಾರ ಮಲ್ಲಿಗೆ,ರಾಘವೇಂದ್ರ ರವರು ಉಪಸ್ಧಿತರಿದ್ದರು.