ಕುಷ್ಠ ರೋಗಿಗಳಿಗೆ ಹೊದಿಕೆ ವಿತರಣೆ

ಬೀದರ್:ನ.3: ಕರ್ನಾಟಕ ರಕ್ಷಣಾ ವೇದಿಕೆ (ಗಜ ಸೇನಾ) ಜಿಲ್ಲಾ ಘಟಕದಿಂದ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕುಷ್ಠ ರೋಗಿಗಳಿಗೆ ಭಾನುವಾರ ಹೊದಿಕೆ ಮತ್ತು ಹಣ್ಣು ವಿತರಣೆ ಮಾಡಲಾಯಿತು.

ತಾಲೂಕಿನ ಚಟ್ನಳ್ಳಿ ಸಮೀಪದ ಕುಷ್ಠ ರೋಗಿಗಳಿಗೆ ಹೊದಿಕೆ, ಶುಟರ್, ಹಣ್ಣು ಸೇರಿದಂತೆ ಇತರೆ ವಸ್ತುಗಳನ್ನು ವಿತರಣೆ ಮಾಡಲಾಯಿತು. ಈ ವೇಳೆ ವೇದಿಕೆ ಜಿಲ್ಲಾಧ್ಯಕ್ಷ ಪ್ರಶಾಂತ ಭಾವಿಕಟ್ಟಿ ಮಾತನಾಡಿ, ರಾಜ್ಯೋತ್ಸವ, ಜಯಂತಿ ಸೇರಿ ಇತರೆ ಕಾರ್ಯಕ್ರಮಗಳ ನಿಮಿತ್ತ ಬಡವರಿಗೆ ನೆರವು ನೀಡುವ ನಿಟ್ಟಿನಲ್ಲಿ ವೇದಿಕೆ ನಿರಂತರ ಕೆಲಸ ಮಾಡುತ್ತಿದೆ. ನೊಂದವರ ನೆರವಿಗೆ ಬರುವುದು ಸಂಘಟನೆಗಳ ಜವಾಬ್ದಾರಿ ಎಂದು ಹೇಳಿದರು.

ಸುಮಾರು 100ಕ್ಕೂ ಅಧಿಕ ರೋಗಿಗಳಿಗೆ ಹೊದಿಕೆ, ಹಣ್ಣು ವಿತರಣೆ ಮಾಡಲಾಗಿದೆ. ಕುಷ್ಠ ರೋಗಿಗಳ ಚೇತರಿಕೆಗೆ ಸಂಘಟನೆ ನಿರಂತರ ಕೆಲಸ ಮಾಡಲಾಗಿದೆ ಎಂದು ಭರವಸೆ ನೀಡಿದರು.

ಸತೀಶ ಘೋಡಂಪಳ್ಳಿಕರ್, ದಯಾಸಾಗರ ಕಡ್ಯಾಳ್, ಸೂರ್ಯಕಾಂತ ದಂಡಿ, ಸೈಮನ್, ಜೀವನ ರಿಕ್ಕಿ, ಕಪೀಲ್ ಮಾಳಗೆ, ಭವನ ಭಾಲ್ಕೆ ಇತರರಿದ್ದರು.