ವಾಡಿ:ಜೂ.20: ಪಟ್ಟಣ ಸಮೀಪದ ಕಮರವಾಡಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನದ ಸಮೀಕ್ಷೆ ನಡೆಸಿದರು. ಪ್ರತಿ ಮನೆಗಳಿಗೆ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸಿದರು.
ಸಮುದಾಯ ಆರೋಗ್ಯ ಅಧಿಕಾರಿ ಸ್ನೇಹಲತಾ ಮಾತನಾಡಿ, ಮಾರಾಕ ರೋಗಗಳು ಕಂಡುಬಂದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಜನರ ಆರೋಗ್ಯ ರಕ್ಷಣೆಯಲ್ಲಿ ಆರೋಗ್ಯ ಇಲಾಖೆ ಸಾಕಷ್ಟು ಮುಂಜಾಗೃತ ಕ್ರಮ ವಹಿಸುತ್ತಿದೆ. ನಾವುಗಳು ನಮ್ಮೂರಿನ ನೈರ್ಮಿಲ್ಯ ವ್ಯವಸ್ಥೆ ಶುಚಿಯಾಗಿಟ್ಟುಕೊಂಡರೆ, ನಾವು ಆರೋಗ್ಯವಂತ ಜೀವನ ನಡೆಸಬಹುದಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಬುಳ್ಳಾ ಮಾತನಾಡಿ, ರೋಗ ಲಕ್ಷಣ ಕಂಡ ತಕ್ಷಣ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಕುಷ್ಠರೋಗ ಪ್ರಕರಣ ಪತ್ತೆ ಅಭಿಯಾನವನ್ನು ಈಗಾಗಲೇ ಪ್ರಾರಂಭವಾಗಿದ್ದ ಆಶಾ ಕಾರ್ಯಕರ್ತೆಯರು, ಪುರುಷ ಸ್ವಯಂ ಸೇವಕರು ಮನೆಗಳಿಗೆ ಭೇಟಿ ನೀಡಿ ಪ್ರಕರಣಗಳನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮಾಡುತ್ತಿದ್ದಾರೆ. ಕುಷ್ಠರೋಗ ಹರಡುವ ಮುನ್ನ ಎಚ್ಚರ ವಹಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಕಿರಣಕುಮಾರ ಧನವಾಡಕರ್, ಆಶಾ ಕಾರ್ಯಕರ್ತೆ ಮರೆಮ್ಮ ಕೊಟಗಾರ ಇದ್ದರು. ಅನೇಕರಿಗೆ ರೋಗ ಪತ್ತೆ ಹಚ್ಚುವ ಮೂಲಕ ಜಾಗೃತಿ ಕೈಗೊಂಡರು.