ಕುಷ್ಠರೋಗ ಕಾಲೋನಿ – ಉಪಹಾರ ವಿತರಣೆ


ರಾಯಚೂರು.ಜೂ.೦೧- ಲೋಕ ಜನಶಕ್ತಿ ಪಕ್ಷದ ನಗರಾಧ್ಯಕ್ಷರಾದ ಬಂಗಿ ಮುನಿರೆಡ್ಡಿ ಅವರ ಹುಟ್ಟು ಹಬ್ಬದ ಅಂಗವಾಗಿ ಕುಷ್ಟರೋಗ ಕಾಲೋನಿಯಲ್ಲಿ ಉಪಹಾರ ಮತ್ತು ವಾಟರ್ ಬಾಟಲ್ ನೀಡಾಲಾಯಿತು.
ಅವರಿಂದು ನಗರದ ಕುಷ್ಟರೋಗ ಕಾಲೋನಿಯಲ್ಲಿ ಉಪಹಾರ ಮತ್ತು ವಾಟರ್ ಬಾಟಲ್ ನೀಡುವ ಮೂಲಕ ಮತ್ತು ಕೊರೋನ ಕಾರಣದಿಂದ ನಿರಂತರವಾಗಿ ಹಗಲು-ರಾತ್ರಿ ಶ್ರಮಿಸುತ್ತಿರುವ ಪೊಲೀಸರಿಗೂ ಉಪಹಾರ ಮತ್ತು ವಾಟರ್ ಬಾಟಲ್ ನೀಡುವ ಮೂಲಕ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಲೋಕ ಜನಶಕ್ತಿ ಪಕ್ಷದ ಕಿಸಾನ್ ಘಟಕದ ರಾಜ್ಯಾಧ್ಯಕ್ಷರು ಹಾಗೂ ಭಾರತೀಯ ಆಹಾರ ನಿಗಮದ ಸದಸ್ಯರಾದ ಜಿ.ವೆಂಕಟ್ ರೆಡ್ಡಿ,ನಗರಾಧ್ಯಕ್ಷರು ಬಂಗಿ ಮುನಿರೆಡ್ಡಿ, ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್,ಶೇಖರ್ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.