ಕುಷ್ಟ ರೋಗ ಪೀಡಿತ 50 ರೋಗಿಗಳಿಗೆ ಹರಕೆ ಆಹಾರ ಕಿಟ್ ವಿತರಣೆ

ಹಗರಿಬೊಮ್ಮನಹಳ್ಳಿ.ಜೂ.೦೨ ಬ್ರೆಡ್ಸ್ ಬೆಂಗಳೂರು,ಡಾನ್ ಬೊಸ್ಕೋ ಸಮಾಜ ಸೇವಾ ಸಂಸ್ಥೆ ಹೊಸಪೇಟೆ,ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ 50 ಕುಷ್ಠರೋಗ ಪೀಡಿತರಿಗೆ ದಿನಸಿ ಕಿಟ್ ಗಳನ್ನು ವಿತರಣೆ ಮಾಡಲಾಯಿತು
ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬುಡ್ಧಿ ಬಸವರಾಜ ವಿತರಿಸಿ ಮಾತನಾಡಿ ಕಳೆದ ಒಂದುವಾರದಿಂದ ಡಾನ್ ಬೋಸ್ಕೊ ಸಂಸ್ಥೆಯು ಅಲೆಮಾರಿಗಳಿಗೆ,ಕೋವಿಡ್ ಪೀಡಿತ ಕುಟುಂಬಗಳಿಗೆ,ದಿನಸಿ ಕಿಟ್ಗಳನ್ನು ಕೊಡುತ್ತಾ ಬಂದಿದ್ದು ಈಗತಾನೆ ಪತ್ರಕರ್ತರಿಗೂ ನೀಡಿರುವುದು ತುಂಬಾ ಉಪಯೋಗವಾಗಿದೆ ಜೊತೆಗೆ ಇಂದು 50 ಕುಷ್ಠರೋಗ ಪೀಡಿತ ಕುಟುಂಬಕ್ಕೆ ಅಹಾರ ದಾನ್ಯ ವಿತರಣೆ ಮಾಡುತ್ತಿರುವದು ತುಂಭಾ ಒಳ್ಳೆ ಕಾರ್ಯ ಎಂದು ಶ್ಲಾಘಿಸಿದರು ಅದೇ ರೀತಿ,ಡಾನ್ ಬೊಸ್ಕೋ ನಿರ್ದೇಶಕರು ಅಗಿರುವ ಪಾಧರ್ ಅನಂದ್ ರವರು ಮಾತನಾಡಿ ಕುಷ್ಠರೋಗ ಪೀಡಿತ ಕುಟುಂಬಗಳು ಸಂಕಷ್ಟದಲ್ಲಿ ಇರುವುದು ನಮಗೆ ಕಂಡುಬಂದಿದ್ದು ಅವರಿಗೆ ನಮ್ಮ ಸಮಾಜ ಸೇವಾ ಸಂಸ್ಥೆಯಿಂದ ದಿನಸಿ ಕಿಟ್ ಗಳನ್ನು ಕೊಡುವುದರ ಮೂಲಕ ಅವರ ಸೇವೆ ಮಾಡಲು ನಮಗೆ ಅವಕಾಶ ಸಿಕ್ಕಿದೆ ಎಂದು ಹೇಳಿದರು ಇದೆ ಸಂದರ್ಭದಲ್ಲಿ ಸಾಂಕೆಂತಿಕವಾಗಿ ಡಾನ್ ಬೊಸ್ಕೋ ನಿರ್ದೇಶಕರಾದ ಪಾಧರ್ ಅನಂದ್ ,ಪತ್ರಕರ್ತರ ಸಂಘದ ಅಧ್ಯಕ್ಷರಾದ ಬುಡ್ಧಿ ಬಸವರಾಜ,ಶರಣಪ್ಪ ಜೆ,ಕ್ರೀಮ್ ಯೋಜನೆಯ ಜಿಲ್ಲಾ ಸಂಯೋಜಕರು, ಸಿಸ್ಟರ್ ಲಿಟಿ,ಸಿಸ್ಟರ್ ಜಾಯನ್,ಸಿಸ್ಟರ್ ವಾಯ್ ರವರರು ಸಾಂಕೇತಿಕವಾಗಿ ಅಹಾರದ ಕಿಟ್ಗಳನ್ನು ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಡಾನ್ ಬೊಸ್ಕೋ ಸಂಸ್ಥೆಯ ಸಿಬ್ಬಂದಿಗಳು ಆಗಿರುವ ಬ್ರದರ್ ಸಂದೇಶ್, ವಿ ಲಯ ಯೋಜನೆಯ ಸಂಯೋಜಕರಾದ ಸದ್ದಾಂ,ತಾಲೂಕು ಸಂಯೋಜಕರಾದ ಬಾಣದ ನಾಗರಾಜ,ಜೋತಿ ಯವರು ಭಾಗವಹಿಸಿದ್ದರು.