
ಕಲಬುರಗಿ,ಮೇ.05:ನಗರದ ಹೊರವಲಯದ ಅಫಜಲಪುರ ರಸ್ತೆಯ ಕುಶಿನಗರದಲ್ಲಿರುವ ಭೌದ್ಧ ಉಪಾಸಕ ಕುಸುಮಾಕರ್ ಎಂ. ಮನೆಯ ಆವರಣ ‘ರಾಜಗೃಹ’ದಲ್ಲಿ ಸರ್ವಧರ್ಮಿಯರು ಜೊತೆಗೂಡಿ ಬುದ್ಧವಂದನೆ, ಬೌದ್ಧ ತತ್ವಗಳ ಪುಸ್ತಕ ವಿತರಣೆ ಮತ್ತು ಸಿಹಿ ವಿನಿಮಯದ ಮೂಲಕ ವಿಶೇಷವಾಗಿ ಮಹಾತ್ಮ ಗೌತವ ಬುದ್ಧ ಅವರ 2567ನೇ ಜಯಂತಿಯನ್ನು ಆಚರಿಸಲಾಯಿತು.
ಪ್ರಮುಖರಾದ ಡಾ.ಸುನೀಲಕುಮಾರ ಎಚ್.ವಂಟಿ, ಎಂ.ಬಿ.ನಿಂಗಪ್ಪ, ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಶಿವಯೋಗಪ್ಪ ಬಿರಾದಾರ, ನೀಲಕಂಠಯ್ಯ ಹಿರೇಮಠ, ಪರಮೇಶ್ವ್ವರ ಬಿ.ದೇಸಾಯಿ, ಅಣ್ಣಾರಾಯ ಎಚ್.ಮಂಗಾಣೆ, ಬಸವರಾಜ ಎಸ್.ಪುರಾಣೆ, ಅನೀಲಕುಮಾರ ಡಬರಾಬಾದ್, ಉಪಾಸಕರಾದ ಸುನೀತಾ ಕುಸುಮಾಕರ್, ಸೃಜನ್, ಶ್ರೇಯಸ್, ಸಾನ್ವಿ, ಮಹಾದೇವಿ ಹೊಸಮನಿ, ವಸಂತಕುಮಾರ ಹೊಸಮನಿ, ಸಂಜೀವಕುಮಾರ, ಉತ್ತಮ ಕೆಂಭಾವಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.