ಸಂಜೆವಾಣಿ ವಾರ್ತೆ
ಶಿವಮೊಗ್ಗ, ಜು. 23; ಶಿವಮೊಗ್ಗ ಜಿಲ್ಲೆ ಶಂಕರಘಟ್ಟದಲ್ಲಿ ಶನಿವಾರ ನಡೆದ ಕುವೆಂಪುವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದಎನ್.ಎಸ್.ಯು.ಐ. ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆಯಿತು.ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮಾಡುತ್ತಿದ್ದ ವೇಳೆಯೇ,ಎನ್.ಎಸ್.ಯು.ಐ ಕಾರ್ಯಕರ್ತರು ವಿಶ್ವವಿದ್ಯಾಲಯ ಕುಲಪತಿ ವಿರುದ್ದ ದಿಢೀರ್ ಘೋಷಣೆಕೂಗಿ ಆಕ್ರೋಶ ವ್ಯಕ್ತಪಡಿಸಿದರು.ತಕ್ಷಣವೇ ಸ್ಥಳದಲ್ಲಿದ್ದ ಪೊಲೀಸರು ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರನ್ನು ಸಮಾರಂಭಸ್ಥಳದಿಂದ ಹೊರ ಕರೆದೊಯ್ದರು. ದಿಢೀರ್ ಘಟನೆಯಿಂದ ಸಮಾರಂಭದಲ್ಲಿ ಕೆಲ ಸಮಯ ಗೊಂದಲದವಾತಾವರಣ ಸೃಷ್ಟಿಯಾಗುವಂತಾಯಿತು.ತನಿಖೆಗೆ ಆಗ್ರಹ: ವಿಶ್ವವಿದ್ಯಾಲಯದ ಸಿಬ್ಬಂದಿಗಳ ನೇಮಕಾತಿಯಲ್ಲಿ ಅವ್ಯವಹಾರನಡೆದಿದೆ. ವಿವಿ ಕುಲಪತಿಗಳು ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ಹಾಗೆಯೇವಿವಿ ಅಧೀನದ ಕಾಲೇಜುಗಳಲ್ಲಿ ಮೂಲಸೌಕರ್ಯಗಳ ಕೊರತೆಯಿದೆ ಎಂದು ಎನ್.ಎಸ್.ಯು.ಐ ಸಂಘಟನೆಮುಖಂಡರು ದೂರಿದ್ದಾರೆ.